ರೇಮೋ. ಪವನ್ ಒಡೆಯರ್ ನಿರ್ದೇಶನದ ಚಿತ್ರ. ಸಿ.ಆರ್.ಮನೋಹರ್ ಅವರ ಸೋದರ ಇಶಾನ್ ಮತ್ತು ಅಶಿಕಾ ರಂಗನಾಥ್ ನಟಿಸಿರೋ ಚಿತ್ರ. ಅದ್ಧೂರಿತನಕ್ಕೆ ಕೊರತೆಯೇ ಇಲ್ಲದಂತೆ ಮೂಡಿಬಂದಿರೋ ರೇಮೋ ಟೀಸರ್ ರಿಲೀಸ್ ಆಗಿದ್ದು.. ಕೂಲ್ ಕೂಲ್ ಆಗಿಯೇ ಶುರುವಾಗಿ ಹಾಟ್ ಹಾಟ್ ಎನಿಸಿಕೊಳ್ಳುತ್ತೆ.
ಚಿತ್ರದ ನಾಯಕ ರೇಮೋ ಮತ್ತು ನಾಯಕಿ ಮೋಹನಳ ಪಾತ್ರವನ್ನು ಪರಿಚಯಿಸಿದ್ದಾರೆ ಪವನ್. ಮ್ಯೂಸಿಕಲ್ ರೊಮ್ಯಾಂಟಿಕ್ ಚಿತ್ರದಲ್ಲಿ ಹೀರೋ ರ್ಯಾಪ್ ಸಿಂಗರ್. ಹೀರೋಯಿನ್ ಕ್ಲಾಸಿಕಲ್ ಸಿಂಗರ್. ಅವರಿಬ್ಬರ ಮಧ್ಯೆ ಬೆಳೆಯೋ ಸ್ನೇಹ.. ಪ್ರೇಮಗಳ ಕಥೆಯೇ ರೇಮೋ.
ಪವನ್ ಒಡೆಯರ್ ನಿರ್ದೇಶನವಿರೋ ಕಾರಣ, ಚೆಂದದ ಕಥೆ ನಿರೀಕ್ಷಿಸಬಹುದು. ಮ್ಯೂಸಿಕ್ಕೇ ಪ್ರಧಾನವಾಗಿರೋ ಚಿತ್ರದಲ್ಲಿ ಅರ್ಜುನ್ ಜನ್ಯಾ ಸಂಗೀತವಿದೆ.