ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಹೃದಯದಲ್ಲಿ ದೇವರೇ ಆಗಿ ಹೋಗಿದ್ದಾರೆ. ಅಂತಹ ಪುನೀತ್ ತಮ್ಮ ಕೊನೆಯ ಚಿತ್ರದಲ್ಲಿ ನಿಜವಾಗಿಯೂ ದೇವರಾಗಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಅಂದಹಾಗೆ ನಾವ್ ಹೇಳ್ತಿರೋದು ಚೇತನ್ ನಿರ್ದೇಶನದ ಜೇಮ್ಸ್ ಬಗ್ಗೆ ಅಲ್ಲ. ಅದರ ನಂತರ ಅಪ್ಪು, ಪ್ರಭುದೇವ ಜೊತೆ ಲಕ್ಕಿ ಮ್ಯಾನ್ ಚಿತ್ರದಲ್ಲಿ ಗೆಸ್ಟ್ ಆಗಿ ನಟಿಸಿದ್ದರು. ಅಪ್ಪು ಮತ್ತು ಪ್ರಭುದೇವ ಡ್ಯಾನ್ಸ್ ಮಾಡುತ್ತಿರುವ ಪುಟ್ಟ ವಿಡಿಯೋಗಳು ವೈರಲ್ ಆಗಿದ್ದವು.
ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ ಆ ಚಿತ್ರದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದಾರಂತೆ. ಪ್ರಭುದೇವ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರ ಲಕ್ಕಿ ಮ್ಯಾನ್. ಸಂಗೀತಾ ಶೃಂಗೇರಿ ಮತ್ತು ರೋಹಿಣಿ ಪ್ರಕಾಶ್ ನಾಯಕಿಯರು. ಈ ಚಿತ್ರದಲ್ಲಿ ಅಪ್ಪು ದೇವರ ಪಾತ್ರವನ್ನೇ ಮಾಡಿದ್ದಾರಂತೆ.
ಪುನೀತ್, ಮಾಸ್ಟರ್ ಲೋಹಿತ್ ಆಗಿದ್ದಾಗ ಭೂಮಿಗೆ ಬಂದ ಭಗವಂತ ಚಿತ್ರದಲ್ಲಿ ಶ್ರೀಕೃಷ್ಣನಾಗಿದ್ದರು. ಭೂಮಿಗೆ ಬಂದ ದೇವಕಿ ಕಂದ.. ಹಾಡು ನೆನಪಿದೆಯಲ್ಲವೇ. ಆ ಹಾಡಿನಲ್ಲಿ ಕೃಷ್ಣನಾಗಿ ಮನಸ್ಸು ಕದ್ದಿದ್ದ ಬಾಲಕ ಪುನೀತ್. ಬಾಲಕನಾಗಿದ್ದಾಗ ಪುನೀತ್ ನಟಿಸಿದ್ದ ಎಲ್ಲ ಚಿತ್ರಗಳಲ್ಲಿ ಡಾ.ರಾಜ್ ಇದ್ದರು. ಡಾ.ರಾಜ್ ಇಲ್ಲದೇ ಇರುವ ಮತ್ತು ಬಾಲಕ ಪುನೀತ್ ನಟಿಸಿರುವ ಏಕೈಕ ಚಿತ್ರ ಭೂಮಿಗೆ ಬಂದ ಭಗವಂತ. ಲೋಕೇಶ್, ಲಕ್ಷ್ಮಿ ಅಭಿನಯದ ಚಿತ್ರವದು.