ಒಂದು ಮೊಟ್ಟೆಯ ಕಥೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ರಾಜ್ ಬಿ. ಶೆಟ್ಟಿ, ಈಗ ಗರುಡ ಗಮನ ವೃಷಭ ವಾಹನದಿಂದ ಬಾಲಿವುಡ್ ತಲುಪಿದ್ದಾರೆ. ಸಿನಿ ರಸಿಕರ ಮೆಚ್ಚುಗೆ ಗಳಿಸಿರುವ ಚಿತ್ರವನ್ನೀಗ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮೆಚ್ಚಿದ್ದಾರೆ.
ಗರುಡ ಗಮನ ವೃಷಭ ವಾಹನ ಸಿನಿಮಾ ಸೃಷ್ಟಿಸಿದ ಸಂಚಲನ ಅನುರಾಗ್ ಕಶ್ಯಪ್ ಅವರಿಗೂ ಮುಟ್ಟಿ, ಅವರು ಸಿನಿಮಾ ನೋಡಿ ರಾಜ್ ಬಿ.ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಕೇವಲ 32 ದಿನದಲ್ಲಿ ಶೂಟಿಂಗ್ ಮುಗಿಸಿದೆವು ಎಂಬುದನ್ನು ಕೇಳಿ ಅನುರಾಗ್ ಕಶ್ಯಪ್ ಇನ್ನಷ್ಟು ಥ್ರಿಲ್ ಆದರು. ತಮ್ಮ ಅಂಗಮಾಲಿ ಡೈರೀಸ್ ಮತ್ತು ಗ್ಯಾಮಗ್ ಆಫ್ ವಸೇಪು್ ಚಿತ್ರಗಳಿಗಿಂತ ಇದು ಭಿನ್ನವಾಗಿದೆ ಎಂದರು ಎಂದು ರಾಜ್ ಬಿ.ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಮಾತುಕತೆಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ರಾಜ್ ಶೆಟ್ಟಿಯವರ ಸಿನಿಮಾ ಮೇಕಿಂಗ್ ಶೈಲಿ ಬಗ್ಗೆ ಉತ್ಸುಕತೆ ತೋರಿ ಮುಂಬೈಗೆ ಬನ್ನಿ ಮಾತನಾಡೋಣ ಎಂದು ಕರೆದಿದ್ದಾರಂತೆ ಅನುರಾಗ್ ಕಶ್ಯಪ್.
ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಅಭಿನಯಕ್ಕೆ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದಾರೆ. ಎಂಥ ಸಾವಾ.. ಬ್ಯಾವರ್ಸಿ.. ಪದಗಳು ಈಗ ಕರುನಾಡಿನ ಮನೆ ಮನೆಯನ್ನೂ ತಲುಪುತ್ತಿರೋದು ವಿಶೇಷ. ಹರಿ ಮತ್ತು ಶಿವನ ಪಾತ್ರಗಳ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳೂ ಶುರುವಾಗಿವೆ. ಅಲ್ಲಿಗೆ ಗ.ಗ.ವೃ.ವಾ. ಗೆದ್ದಿದೆ.