ಗೋವಿಂದ ಗೋವಿಂದ ಅಪ್ಪಟ ಕಾಮಿಡಿ ಮೂವಿ. ಹೀರೋ ಸುಮಂತ್ ಶೈಲೇಂದ್ರಬಾಬು. ಹೀರೋಯಿನ್ ಕವಿತಾ ಗೌಡ. ಇದರ ಮಧ್ಯೆ ಜಾಕಿ ಭಾವನಾ ಕಥೆ ಏನು? ಡೌಟೇ ಇಲ್ಲ.. ಭಾವನಾ ಕೂಡಾ ಗೋವಿಂದ ಗೋವಿಂದ ಚಿತ್ರದಲ್ಲಿ ಹೀರೋಯಿನ್. ಅರೆ.. ಅದು ಹೇಗೆ ಅಂತೀರಾ..ಚಿತ್ರದಲ್ಲಿ ಭಾವನಾ ಸಿನಿಮಾ ಹೀರೋಯಿನ್ ಆಗಿಯೇ ನಟಿಸಿದ್ದಾರೆ. ಪದ್ಮಾವತಿಯಾಗಿ.
ಚಿತ್ರದಲ್ಲಿ ಎರಡು ಟ್ರ್ಯಾಕ್ ಬರುತ್ತವೆ. ಎರಡೂ ಟ್ರ್ಯಾಕ್ ಏಕಕಾಲಕ್ಕೆ ರನ್ ಆಗುತ್ತಿರುತ್ತವೆ. ನಾನು ಚಿತ್ರದಲ್ಲಿ ಸಿನಿಮಾ ಹೀರೋಯಿನ್ ಆಗಿಯೇ ನಟಿಸಿದ್ದೇನೆ. ನನಗೆ ನಿರ್ದೇಶಕನೊಬ್ಬ ಕಥೆ ಹೇಳೋಕೆ ಬರುತ್ತಾನೆ. ಚಿತ್ರದಲ್ಲಿ ನನ್ನ ರೋಲ್ ಬಹಳ ಕಡಿಮೆ. ನಾನು ಸುಮಾರು ಐದಾರು ದಿನವಷ್ಟೇ ಈ ಸಿನಿಮಾಗೆ ಕೆಲಸ ಮಾಡಿದ್ದೇನೆ. ಆದರೆ, ಅಷ್ಟೂ ದಿನ ಹೊಟ್ಟೆಹುಣ್ಣಾಗುವಂತೆ ನಕ್ಕಿದ್ದೇನೆ ಎನ್ನುತ್ತಾರೆ ಭಾವನಾ.
ತಿಲಕ್ ನಿರ್ದೇಶನಕ್ಕೆ ಭಾವನಾ 100ಕ್ಕೆ 100 ಅಂಕ ಕೊಟ್ಟಿದ್ದಾರೆ. ಅವರು ಹೊಸ ನಿರ್ದೇಶಕ ಎನಿಸುವುದೇ ಇಲ್ಲ. ತುಂಬಾ ಚೆನ್ನಾಗಿ ಕಥೆ ಹೇಳುವ ಅನುಭವ ಅವರಿಗೆ ಇದೆ ಅನ್ನೋದು ಭಾವನಾ ಮಾತು. ಸಿನಿಮಾ ಈಗ ಥಿಯೇಟರಿನಲ್ಲಿದೆ. ನೋಡಿ.. ನಕ್ಕು.. ನಲಿದು.. ಹಗುರಾಗಿ..