ಇದು ಪಕ್ಕಾ ಕಾಮಿಡಿ ಸಿನಿಮಾ. ಚಿತ್ರದಲ್ಲಿ ಎರಡು ಟ್ರ್ಯಾಕ್‍ಗಳಿವೆ. ಒಬ್ಬ ಹೊಸ ನಿರ್ದೇಶಕ ಖ್ಯಾತ ನಟಿಗೆ ಕಥೆ ಹೇಳಿ ಆಕೆಯ ಡೇಟ್ಸ್ ಕೇಳೋದು ಒಂದು. ಮತ್ತೊಂದು.. ತಂದೆಯ ವಿರೋಧದ ನಡುವೆಯೂ ಭರತನಾಟ್ಯ ಕಲಾವಿದೆಯಾಗಲು ಬಯಸುವ ನಾಯಕಿ. ಆಕೆಯ ಕನಸು ಈಡೇರಿಸಲು ಹೊರಡುವ ಗೆಳೆಯರ ಬಳಗ. ಈ ಎರಡೂ ಸೃಷ್ಟಿಸುವ ಅವಾಂತರಗಳು, ತರಲೆಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಮೆಸೇಜ್ ಸೀರಿಯಸ್ಸೇ. ಆದರೆ, ಹೇಳಿರೋದು ಮಾತ್ರ ಪಕ್ಕಾ ಕಾಮಿಡಿ ಟ್ರ್ಯಾಕ್‍ನಲ್ಲಿ. ಎಲ್ಲ ಸಂಕಟಗಳನ್ನೂ ಮರೆತು ಹೊಟ್ಟೆ ಹುಣ್ಣಾಗುವಂತೆ ನಕ್ಕು ಹಗುರಾಗಬಹುದಾದ ಸಿನಿಮಾ ಗೋವಿಂದ ಗೋವಿಂದ.
ಇದು ಚಿತ್ರದ ನಾಯಕ ಸುಮಂತ್ ಶೈಲೇಂದ್ರಬಾಬು ಅವರ ಆತ್ಮವಿಶ್ವಾಸದ ಮಾತು. ಕ್ರೆಡಿಟ್ ಎಲ್ಲವನ್ನೂ ಡೈರೆಕ್ಟರ್ ತಿಲಕ್ ಅವರಿಗೆ ನೀಡೋ ಸುಮಂತ್, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಭರತನಾಟ್ಯದ ಆಸೆ ಹೊತ್ತಿರೋ ನಾಯಕಿಯಾಗಿ ಕವಿತಾ ಗೌಡ, ಆಕೆಯ ತಂದೆಯಾಗಿ ಪ್ರಿನ್ಸಿಪಾಲ್ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪವನ್, ವಿಜಯ್ ಚೆಂಡೂರ್, ರೂಪೇಶ್ ಶೆಟ್ಟಿ, ಸುನೇತ್ರಾ ಪಂಡಿತ್.. ಹೀಗೆ ಕಲಾವಿದರ ದಂಡೇ ಚಿತ್ರದಲ್ಲಿದೆ. ನಕ್ಕು ನಲಿಯೋಕೆ ರೆಡಿಯಾಗಿ ಅಷ್ಟೆ. ನ.26ಕ್ಕೆ ರಿಲೀಸ್.