` ಮದ್ರಾಸ್ ಹೈಕೋರ್ಟ್ ಐತಿಹಾಸಿಕ ತೀರ್ಪು : ನಿರ್ಮಾಪಕರೇ ಎಲ್ಲದಕ್ಕೂ ಬಾಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮದ್ರಾಸ್ ಹೈಕೋರ್ಟ್ ಐತಿಹಾಸಿಕ ತೀರ್ಪು : ನಿರ್ಮಾಪಕರೇ ಎಲ್ಲದಕ್ಕೂ ಬಾಸ್
Madras High Court

ಒಂದು ಚಿತ್ರ ನಿರ್ಮಾಣವಾಗುವಾಗ ಅದರಲ್ಲಿ ನಟ, ನಟಿಯರು, ತಂತ್ರಜ್ಞರು ಎಲ್ಲರೂ ಸೇರಿಯೇ ಕೆಲಸ ಮಾಡಿರುತ್ತಾರೆ. ಅವರೆಲ್ಲರಿಗೂ ನಿರ್ಮಾಪಕರಾದವರು ಸಂಭಾವನೆಯನ್ನೂ ನೀಡಿರುತ್ತಾರೆ. ಅಷ್ಟು ಮುಗಿದ ಮೇಲೆ ಅದರ ಸಂಪೂರ್ಣ ಕಾಪಿರೈಟ್ ನಿರ್ಮಾಪಕರದ್ದೇ ಹೊರತು, ಅದನ್ನು ಬರೆದ ಅಥವಾ ಚಿತ್ರದಲ್ಲಿ ತೊಡಗಿಸಿಕೊಂಡವರದ್ದಲ್ಲ. ಅವರಿಗೆ ಕ್ರೆಡಿಟ್ ನೀಡಬೇಕೇ ಅಥವಾ ಬೇಡವೇ ಎನ್ನುವುದನ್ನೂ ಕೂಡಾ ನಿರ್ಮಾಪಕರೇ ನಿರ್ಧರಿಸುತ್ತಾರೆ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ತಮಿಳಿನ ವಾಲಿ ಚಿತ್ರದ ಸಂಭಾಷಣೆ ಬಗ್ಗೆ ದಾಖಲಾಗಿದ್ದ ಮೊಕದ್ದಮೆಯಲ್ಲಿ ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದವರಿಗೆ ಚಿತ್ರದ ಮೇಲೆ ಕಾಪಿರೈಟ್ ಇರುವುದಿಲ್ಲ. ಅದು ಅದಕ್ಕೆ ಹಣ ನೀಡಿ ಖರೀದಿಸಿದ್ದ ನಿರ್ಮಾಪಕರ ಹಕ್ಕು ಎಂದು ಅದು ಹೇಳಿದೆ.

ವಾಲಿ ಚಿತ್ರ ಕನ್ನಡ ಸೇರಿದಂತೆ ಹಲವು ಬಾಷೆಗಳಿಗೆ ರೀಮೇಕ್ ಆಗಿದ್ದು, ಅದಕ್ಕೆ ನನ್ನ ಒಪ್ಪಿಗೆ ಪಡೆದಿಲ್ಲ ಎಂದು ಆ ಚಿತ್ರದ ಚಿತ್ರಕಥೆ ಬರೆದವರು ಕೋರ್ಟ್ ಮೆಟ್ಟಿಲೇರಿದ್ದರು. ಇದು ಕಾಪಿರೈಟ್ ಉಲ್ಲಂಘನೆ ಎಂದು ಅವರು ವಾದಿಸಿದ್ದರು. ಅವರ ವಾದಕ್ಕೆ ಹಿನ್ನಡೆಯಾಗಿದೆ. ಒಂದು ಚಿತ್ರದ ಮೇಲೆ ಸಂಪೂರ್ಣ ಹಕ್ಕು ನಿರ್ಮಾಪಕರದ್ದೇ ಆಗಿರುತ್ತದೆ ಎಂದು ಕೋರ್ಟ್ ಹೇಳಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery