` ಬೇಜವಾಬ್ದಾರಿತನಕ್ಕೆ ಬಾಗಿಲು ಬಂದ್ : ಮೇಲುಕೋಟೆ ಶೂಟಿಂಗ್ ಕ್ಯಾನ್ಸಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬೇಜವಾಬ್ದಾರಿತನಕ್ಕೆ ಬಾಗಿಲು ಬಂದ್ : ಮೇಲುಕೋಟೆ ಶೂಟಿಂಗ್ ಕ್ಯಾನ್ಸಲ್
Melukote

ಮೇಲುಕೋಟೆ. ಚೆಲುವನಾರಾಯಣ ಸ್ವಾಮಿಯ ಈ ಊರು ಕನ್ನಡ ಅಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗು ಚಿತ್ರರಂಗದವರಿಗೂ ಹಾಟ್ ಫೇವರಿಟ್. ಕ್ಯಾಮೆರಾ ಕಣ್ಣಿಗೆ ಚೆಂದವಾಗಿ ಕಾಣುವ ಕಲ್ಯಾಣಿ, ದೇಗುಲ, ಮಂಟಪ, ಹಸಿರು ಹಸಿರು ವಾತಾವರಣ ಮೇಲುಕೋಟೆಯಲ್ಲಿದೆ. ಅದರೆ, ಇನ್ನು ಮುಂದೆ ಮೇಲುಕೋಟೆಯಲ್ಲಿ ಸಿನಿಮಾ ಚಿತ್ರೀಕರಣ ಕಷ್ಟ. ಚಿತ್ರರಂಗದವರ ವಿರುದ್ಧ ಮೇಲುಕೋಟೆ ಗ್ರಾಮಸ್ಥರೇ ಸಿಟ್ಟಿಗೆದ್ದಿದ್ದಾರೆ.

ಸಿನಿಮಾದವರು ಬರುತ್ತಾರೆ. ಬೇಡ ಬೇಡ ಎಂದರೂ ದೊಡ್ಡ ದೊಡ್ಡ ಕ್ರೇನ್‍ಗಳನ್ನು ಮೇಲಕ್ಕೆ ತರುತ್ತಾರೆ. ಇದೊಂದು ಪ್ರಾಚೀನ ಪಾರಂಪರಿಕ ಸ್ಥಳ ಎನ್ನುವ ಅರಿವೂ ಇರಲ್ಲ. ಜೊತೆಗೆ ತಿನ್ನೋಕೆ, ಕುಡಿಯೋಕೆ ತಂದಿದ್ದ ಬಾಟಲಿ, ಬ್ಯಾಗ್, ಪ್ಲಾಸ್ಟಿಕ್ ಸೇರಿದಂತೆ ಎಲ್ಲ ವೇಸ್ಟುಗಳನ್ನೂ ಇಲ್ಲೇ ಸುರಿದು ಹೋಗುತ್ತಾರೆ. ಕ್ಲೀನ್ ಆಗಿಟ್ಟುಕೊಳ್ಳಲ್ಲ. ಇತ್ತೀಚೆಗೆ ತೆಲುಗು ಚಿತ್ರತಂಡದವರು ಬಂದು ಮೇಲುಕೋಟೆಯ ಕಲ್ಯಾಣಿಯ ಮೆಟ್ಟಿಲುಗಳಿಗೆ ಬಣ್ಣ ಬಳಿದರು. ನೀರಿನ ತುಂಬಾ ಕೆಮಿಕಲ್ ಬಣ್ಣ ತುಂಬಿಸಿದರು. ಹೋದರು. ಕಲ್ಯಾಣಿ ಹಾಳಾಯಿತು. ಕೇಳಲು ಹೋದರೆ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

ಗ್ರಾಮಸ್ಥರ ಆಕ್ರೋಶಕ್ಕೆ ಮಣಿದಿರುವ ಅಧಿಕಾರಿಗಳು ಅತ್ತ ತಪ್ಪಾಗಿದೆ ಎಂದು ಒಪ್ಪಿಕೊಳ್ಳೋದೂ ಇಲ್ಲ. ಆಗಿಯೇ ಇಲ್ಲ ಎಂದು ಹೇಳೋದೂ ಇಲ್ಲ. ನೀರನ್ನು ಲ್ಯಾಬ್‍ಗೆ ಪರೀಕ್ಷೆಗೆ ಕಳಿಸಿದ್ದೇವೆ. ಆ ರಿಪೋರ್ಟ್ ಬಂದ ಮೇಲೆ ನೋಡೋಣ ಎನ್ನುತ್ತಿದ್ದಾರೆ.

ಆದರೆ, ಮೇಲುಕೋಟೆ ಗ್ರಾಮಸ್ಥರು ಸ್ಥಳೀಯವಾಗಿ ಒಂದು ನಿರ್ಣಯ ಅಂಗೀಕರಿಸಿದ್ದಾರೆ. ಇನ್ನು ಮುಂದೆ ಸಿನಿಮಾ ತಂಡದವರಿಗೆ ಚಿತ್ರೀಕರಣಕ್ಕೆ ಮೇಲುಕೋಟೆಯಲ್ಲಿ ಅವಕಾಶ ಕೊಡಬಾರದು ಎನ್ನುವುದೇ ಆ ನಿರ್ಣಯ.