ಒಂದು ಫ್ಯಾಮಿಲಿ ಥ್ರಿಲ್ಲರ್. ಇನ್ನೊಂದು ಅಂಡರ್‍ವಲ್ರ್ಡ್ ಥ್ರಿಲ್ಲರ್. ಮತ್ತೊಂದು ಲವ್ಲೀ ಥ್ರಿಲ್ಲರ್. ಈ ವಾರದ ಸ್ಪೆಷಲ್ ಸಿನಿಮಾಗಳಿವು.
100 ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನವಿದೆ. ಅವರೇ ಹೀರೋ. ರಚಿತಾ ರಾಮ್ ಮತ್ತು ಪೂರ್ಣ ನಾಯಕಿಯಾಗಿರೋ ಚಿತ್ರದಲ್ಲಿ ಸೈಬರ್ ಕ್ರೈಂ ಸ್ಟೋರಿ ಇದೆ. ಇದು ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿಯೇ ಜಗತ್ತು ನೋಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ನೋಡಬೇಕಾದ ಸಿನಿಮಾ.
ಗರುಡ ಗಮನ ವೃಷಭ ವಾಹನ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಒಟ್ಟಿಗೇ ನಟಿಸಿರೋ ಸಿನಿಮಾ. ಮೊಟ್ಟೆ ನಂತರ ರಾಜ್ ಬಿ.ಶೆಟ್ಟಿ ನಿರ್ದೇಶನವನ್ನೂ ಮಾಡಿರುವ ಸಿನಿಮಾ. ಕರಾವಳಿ ಭೂಗತ ಜಗತ್ತನ್ನು ಬೇರೆಯದೇ ಶೇಡ್‍ನಲ್ಲಿ ತೋರಿಸಿರೋ ಚಿತ್ರದಲ್ಲಿ ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್, ಹಾಡು ಗಮನ ಸೆಳೆದಿವೆ.
ಇದೇ ವಾರ ರಿಲೀಸ್ ಆಗುತ್ತಿರೋ ಯೂಥ್ ಲವ್ ಸ್ಟೋರಿ ಮುಗಿಲ್ ಪೇಟೆ. ಮನುರಂಜನ್ ರವಿಚಂದ್ರನ್, ಕಯಾದು ನಟಿಸಿರೋ ಚಿತ್ರದಲ್ಲಿ ಲವ್ ಫೀಲಿಂಗ್ ಸಖತ್ತಾಗಿಯೇ ಇದೆ. ಭರತ್ ಎಸ್.ನಾವುಂದ ನಿರ್ದೇಶನದ ಚಿತ್ರ ಪ್ರೇಮಿಗಳಿಗೆ ಪ್ರೀತಿಯ ಪರಾಕಾಷ್ಠೆ ತೋರಿಸೋ ನಿರೀಕ್ಷೆಯಂತೂ ಇದೆ.