ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬರು ರಿಷಬ್ ಶೆಟ್ಟಿ. ಮತ್ತೊಬ್ಬರು ರಾಜ್ ಬಿ.ಶೆಟ್ಟಿ. ಇವರಿಬ್ಬರಲ್ಲಿ ತೆರೆಯ ಹಿಂದೆಯೂ ಹೀರೋ ಆಗಿ ಡೈರೆಕ್ಟ್ ಮಾಡಿರೋದು ರಾಜ್ ಬಿ.ಶೆಟ್ಟಿ. ಈ ಇಬ್ಬರ ಜೊತೆ ಇನ್ನೂ ಒಬ್ಬರು ಸ್ಟಾರ್ ಇದ್ದಾರೆ. ಅದು ರಕ್ಷಿತ್ ಶೆಟ್ಟಿ. ಚಿತ್ರದ ವಿತರಣೆ ಅವರದ್ದೇ. ವಿಶೇಷವೆಂದರೆ ಈ ಮೂವರೂ ಹೀರೋಗಳೇ. ಮೂವರೂ ನಿರ್ಮಾಪಕರೇ. ಮೂವರೂ ನಿರ್ದೇಶಕರೇ. ಮೂವರೂ ಪರಸ್ಪರ ಗೆಳೆಯರೇ.
ಹೀಗಾಗಿ ಇದನ್ನು ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರೇ ಮಾಡಿರುವ ಸ್ನೇಹಿತರ ಕಥೆ ಎನ್ನಬಹುದು. ಏಕೆಂದರೆ ಚಿತ್ರದಲ್ಲಿ ಬರೋ ಹರಿ ಮತ್ತು ಹರ ಇಬ್ಬರೂ ಗೆಳೆಯರು. ಆ ಗೆಳೆಯರ ನಡುವಿನ ಕಥೆಯೇ ಗರುಡ ಗಮನ ವೃಷಭ ವಾಹನ. ಇದೇ ವಾರ ರಿಲೀಸ್ ಆಗುತ್ತಿದೆ.
ಚಿತ್ರದಲ್ಲಿ ಮಂಗಳೂರಿನ ಭೂಗತ ಜಗತ್ತಿನ ಕಥಾ ಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭ ವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ಕೋಪಿಷ್ಠ ಸ್ವಭಾವ. ಇಂಥ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್ ಮಾಡ್ತಾರೆ ಅನ್ನುವುದೇ ಕಥೆ. ಲೈಟರ್ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಪರಂವಃ ಸ್ಟುಡಿಯೋ ಮೂಲಕ ಚಿತ್ರ ರಿಲೀಸ್ ಆಗುತ್ತಿದೆ.