ಪ್ರೇಮಂ ಪೂಜ್ಯಂ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರೀತಿಯನ್ನು ದೇವರಿಗೆ ಹೋಲಿಸಿ ಪವಿತ್ರ ಪ್ರೀತಿಯೇ ಶ್ರೇಷ್ಟ ಎಂದು ತೋರಿಸಿರುವ ಪರಿ ಎಲ್ಲ ವಯೋಮಾನದವರಿಗೂ ಮೆಚ್ಚುಗೆಯಾಗಿದೆ. ವಿಶೇಷವಾಗಿ ವೈದ್ಯರಿಗೆ.
ಇದು ವೈದ್ಯರಿಂದ ವೈದ್ಯರಿಗಾಗಿ ವೈದ್ಯರೇ ಸೃಷ್ಟಿಸಿರುವ ಅಪರೂಪದ ಸಿನಿಮಾ. ಚಿತ್ರದ ನಿರ್ಮಾಪಕರೂ ಡಾಕ್ಟರ್ಸ್. ನಿರ್ದೇಶಕರೂ ಡಾಕ್ಟರ್. ಸಂಗೀತ ನಿರ್ದೇಶಕರೂ ಡಾಕ್ಟರ್. ಹೀಗಾಗಿ ವೈದ್ಯರಿಗೆ ಸಿನಿಮಾ ಇನ್ನಷ್ಟು ಇಷ್ಟವಾಗಿದೆ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಡಾ.ರಾಘವೇಂದ್ರ ನಿರ್ದೇಶಿಸಿರುವ ಚಿತ್ರವನ್ನು ವೈದ್ಯರುಗಳು ತಂಡೋಪತಂಡವಾಗಿ ಬಂದು ನೋಡಿ ಮೆಚ್ಚಿದ್ದಾರೆ.