ಡಾ.ರಾಜ್, ಪಾರ್ವತಮ್ಮ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಸಮಾಧಿ ಸ್ಥಳಗಳಿಗೆ ಪೂಜೆ ಸಲ್ಲಿಸಿ ಬನಾರಸ್ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದ ಮೂಲಕ ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ ಜಾಯೇದ್ ಖಾನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸೋನಲ್ ಮಂಥೆರೋ ಚಿತ್ರದ ನಾಯಕಿ.
ಪುನೀತ್ ಸಮಾಧಿ ಎದುರು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಮಾತನಾಡಿದ ಚಿತ್ರತಂಡದವರು ಈ ಚಿತ್ರದ ಫಸ್ಟ್ ಲುಕ್ನ್ನು ಸ್ವತಃ ಪುನೀತ್ ಅವರೇ ಬಿಡುಗಡೆ ಮಾಡಬೇಕಿತ್ತು. ಪುನೀತ್ ಅವರೂ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದರು. ದುರದೃಷ್ಟವಶಾತ್ ಅವರ ಪುಣ್ಯಭೂಮಿಯಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿತು. ಬನಾರಸ್ ಸಿನಿಮಾ ಕನ್ನಡ ಅಷ್ಟೇ ಅಲ್ಲದೆ 5 ಭಾಷೆಗಳಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ.