` ಅಪ್ಪು ಓದಿಸುತ್ತಿದ್ದ 1800 ವಿದ್ಯಾರ್ಥಿಗಳ ಹೊಣೆ ನನ್ನದು : ವಿಶಾಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪು ಓದಿಸುತ್ತಿದ್ದ 1800 ವಿದ್ಯಾರ್ಥಿಗಳ ಹೊಣೆ ನನ್ನದು : ವಿಶಾಲ್
Actor Vishal, Puneeth Rajkumar

ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರನ್ನು ನೋಡಿದಾಗಲೆಲ್ಲ ನನಗೆ ಅಪ್ಪು ನೋಡಿದಂತೆಯೇ ಆಗುತ್ತದೆ ಎಂದಿದ್ದರು ಶಿವಣ್ಣ. ಅದನ್ನು ಅಪ್ಪು ಎದುರೇ ವಿಶಾಲ್ ಅವರಿಗೂ ಹೇಳಿದ್ದರಂತೆ. ಶಿವಣ್ಣ ಹೇಳುವಾಗ  ಇನ್ನಷ್ಟು ಭಾವುಕರಾದ ವಿಶಾಲ್ ಪುನೀತ್ ನಮನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದರು. ಈಗ ಅಪ್ಪು ಅವರ ಸೇವೆಯನ್ನು ತಾವು ಮುಂದುವರೆಸೋದಾಗಿ ಹೇಳಿದ್ದಾರೆ. ಈ ಹಿಂದೆಯೂ ವಿಶಾಲ್ ಈ ಮಾತು ಹೇಳಿದ್ದರು. ಆದರೆ, ಅದು ಅಂದು ವೇದಿಕೆಯ ಘೋಷಣೆಗಷ್ಟೇ ಸೀಮಿತವಾಗದೆ ಅಪ್ಪು ಪುನೀತ ನಮನದಲ್ಲೂ ಪುನರುಚ್ಚರಿಸಿದರು.

ಪುನೀತ್ ನನ್ನ ಅಣ್ಣ. ನನ್ನ ತಂದೆ ಕನ್ನಡಿಗ. ನನಗೆ ಸ್ವಲ್ಪ ಕನ್ನಡ ಗೊತ್ತು. ಶಿವಣ್ಣ ಮತ್ತು ರಾಘಣ್ಣ ಅವರಲ್ಲಿ ನನ್ನದೊಂದು ಮನವಿ. ಇದನ್ನು ನಾನು ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಹಣ ಇದೆ ಎಂಬ ಹಮ್ಮಿನಲ್ಲಿ ಹೇಳುತ್ತಿಲ್ಲ. ನನಗೊಂದು ಅವಕಾಶ ಕೊಡಿ. ಅಪ್ಪು ಮಾಡುತ್ತಿದ್ದ ಸೇವೆಯನ್ನು ಮುಂದುವರೆಸುವ ಆಸೆ ಇದೆ. ಆ 1800 ಮಕ್ಕಳನ್ನು ಓದಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ ವಿಶಾಲ್.

ಅಷ್ಟೇ ಅಲ್ಲ, ಪುನೀತ ನಮನ ಮುಗಿದ ಮಾರನೆಯ ದಿನ ಅಪ್ಪು ಪುಣ್ಯಭೂಮಿಗೆ ಹೋಗಿ, ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ಮತ್ತು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಈಗ ಅವರು ದುಃಖದಲ್ಲಿದ್ದಾರೆ. ಮಾತನಾಡುವುದಕ್ಕೆ ಇದು ಸಮಯ ಅಲ್ಲ.  ಎಲ್ಲವೂ ಒಂದು ಹಂತಕ್ಕೆ ಬಂದ ಮೇಲೆ ಮತ್ತೊಮ್ಮೆ ಭೇಟಿ ಮಾಡಿ ಆ ಹೊಣೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery