` ಎಲ್ಲ ಓಕೆ. ಆಂಟನಿ ಸಾಮಿ ಗುರುಮೂರ್ತಿಯಾಗಿದ್ದೇಕೆ? : ಜೈ ಭೀಮ್ ವಿರುದ್ಧ ಕೆರಳಿದ ವನ್ನಿಯರ್ ಸಮುದಾಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಲ್ಲ ಓಕೆ. ಆಂಟನಿ ಸಾಮಿ ಗುರುಮೂರ್ತಿಯಾಗಿದ್ದೇಕೆ? : ಜೈ ಭೀಮ್ ವಿರುದ್ಧ ಕೆರಳಿದ ವನ್ನಿಯರ್ ಸಮುದಾಯ
Kannada Movie Jai Bhim

ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್ ಆಗಿ ದೇಶಾದ್ಯಂತ ಗಮನ ಸೆಳೆದ ಸಿನಿಮಾ ತಮಿಳಿನ ಜೈ ಭೀಮ್. ಇರುಳರ್ ಸಮುದಾಯದವರು ಎದುರಿಸಿದ್ದ 90ರ ದಶಕದ ನೋವು, ಅವಮಾನದ ಕಥೆ, ಅದನ್ನು ಎದುರಿಸಿ ಹೋರಾಡಿದ್ದ ಸಮುದಾಯದವರ ಬೆನ್ನಿಗೆ ನಿಂತಿದ್ದ ಚಂದ್ರು ಎಂಬ ವಕೀಲರ ಕಥೆ ಚಿತ್ರದಲ್ಲಿತ್ತು. ಇದು ಸತ್ಯಕಥೆ ಆಧಾರಿತ ಚಿತ್ರ. ಅದ್ಭುತವಾದ ಚಿತ್ರಕಥೆ, ಅಭಿನಯ, ದೃಶ್ಯ ಸಂಯೋಜನೆ.. ಎಲ್ಲವೂ ಮೇಳೈಸಿ ಬಂದಿದ್ದ ಚಿತ್ರ ಎಲ್ಲ ಭಾಷೆಗಳಲ್ಲೂ ಮೆಚ್ಚುಗೆ ಗಳಿಸಿದೆ. ಆದರೆ, ಈಗ ಚಿತ್ರ ತಂಡದ ವಿರುದ್ಧ ವನ್ನಿಯರ್ ಸಮುದಾಯ ತಿರುಗಿಬಿದ್ದಿದೆ.

ಚಿತ್ರದಲ್ಲಿ ಗುರುಮೂರ್ತಿ ಎಂಬ ಪೊಲೀಸ್ ಪಾತ್ರ ಬರುತ್ತೆ. ಇರುಳರ್ ಸಮುದಾಯದವರನ್ನು ಹಿಂಸಿಸುವ ಪೊಲೀಸ್ ಪಾತ್ರವದು. ಲಾಕಪ್‍ಡೆತ್‍ಗೆ ಕಾರಣವಾಗುವ ಪೊಲೀಸ್ ಆತನೇ. ಆದರೆ, ಸತ್ಯಕಥೆಯಲ್ಲಿ ಆ ರೀತಿ ಹಿಂಸೆ ಮಾಡಿದ್ದ ಪೊಲೀಸ್ ಹೆಸರು ಆಂಟನಿ ಸಾಮಿ.

ಉಳಿದ ಎಲ್ಲ ಪಾತ್ರಗಳ ಹೆಸರನ್ನೂ ಹಾಗೆಯೇ ಉಳಿಸಿಕೊಂಡು ಆಂಟನಿ ಸಾಮಿಯ ಪಾತ್ರದ ಹೆಸರನ್ನು ಮಾತ್ರವೇ ಬದಲಿಸಲಾಗಿದೆ. ಅಲ್ಲದೆ ಸಿನಿಮಾದಲ್ಲಿ ಆತ ವನ್ನಿಯರ್ ಸಮುದಾಯದವನು ಎಂಬಂತೆ ತೋರಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆದಿರೋ, ವನ್ನಿಯರ್ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಸಂಚು ಎಂದು ದೂರಿರುವ ಸಮುದಾಯದ ಮುಖಂಡರು ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. 5 ಕೋಟಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಆದರೆ, ಈ ಕೇಸ್ ಕೋರ್ಟಿನಲ್ಲಿ ನಿಲ್ಲುವುದೇ ಎಂಬ ಪ್ರಶ್ನೆ ಉದ್ಭವವಾಗುತ್ತೆ. ಏಕೆಂದರೆ ಇಂತಹುದೇ ವಾದ ಚಕ್ ದೇ ಇಂಡಿಯಾ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲೂ ಕೇಳಿ ಬಂದಿತ್ತು. ಚಕ್ ದೇ ಇಂಡಿಯಾದಲ್ಲೂ ಅಷ್ಟೆ, ಅದೂ ಕೂಡಾ ಸತ್ಯಕಥೆ ಆಧರಿಸಿದ ಸಿನಿಮಾ. ವಾಸ್ತವದಲ್ಲಿ ಆ ರೀತಿ ನೋವು, ಅವಮಾನ ಅನುಭವಿಸುವುದು ರಂಜನ್ ನೇಗಿ ಎಂಬ ಸಿಖ್ ಆಟಗಾರ. ಆದರೆ ಸಿನಿಮಾದಲ್ಲಿ ಆ ಪಾತ್ರವನ್ನು ಕಬೀರ್ ಖಾನ್ ಎಂದು ಬದಲಿಸಲಾಗಿತ್ತು. ಕೆಲವರು ಕೋರ್ಟ್ ಮೆಟ್ಟಿಲು ಹತ್ತಿದರಾದರೂ ಕೇಸ್ ನಿಲ್ಲಲಿಲ್ಲ.