100. ಇದು ಪೊಲೀಸ್ ಎಮರ್ಜೆನ್ಸಿ ಡಯಲ್ ನಂಬರ್. ಯಾರಿಗೆ ಏನೇ ಸಮಸ್ಯೆ ಆದರೂ 100ಗೆ ಕಾಲ್ ಹೋಗುತ್ತೆ. ಆ ಸಮಸ್ಯೆಗೆ ಪರಿಹಾರ ಹುಡುಕಬೇಕಾದವರು ಪೊಲೀಸ್. ಅಂತಹ ಪೊಲೀಸ್ ಅಧಿಕಾರಿ ವಿಷ್ಣು. ರಮೇಶ್ ಅರವಿಂದ್.
ಆ ವಿಷ್ಣುವಿಗೆ ಒಬ್ಬಳು ಮುದ್ದಿನ ತಂಗಿ. ಅಣ್ಣನನ್ನು ಗೋಳು ಹೊಯ್ದುಕೊಳ್ಳೋ ತರಲೆ.. ತುಂಟಿ.. ರಚಿತಾ ರಾಮ್.
ಪೂರ್ಣ ಆ ಕುಟುಂಬದ ಯಜಮಾನಿ.
ಆ ಮನೆಗೊಬ್ಬ ಕ್ರಿಮಿನಲ್ ಎಂಟ್ರಿ ಕೊಡ್ತಾನೆ. ಅವನು ಸೈಬರ್ ಕ್ರಿಮಿನಲ್. ಇನ್ಸ್ಸ್ಟಾ ಮೂಲಕ ಎಂಟ್ರಿ ಕೊಡೋ ಆತ ಇಡೀ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡು ಬಿಡ್ತಾನೆ.. ಅದರಿಂದ ಹೊರಬರೋಕೆ ವಿಷ್ಣು ಪಡೋ ಸಾಹಸವೇ 100 ಸ್ಟೋರಿ.
ನಿರ್ಮಾಪಕ ರಮೇಶ್ ರೆಡ್ಡಿ ಅವರ ಫ್ರೆಂಡ್ ಮನೆಯಲ್ಲಿ ರಿಯಲ್ಲಾಗಿ ನಡೆದ ಘಟನೆಗೆ ಸಿನಿಮಾಟಿಕ್ ಟಚ್ ಕೊಟ್ಟಿದ್ದಾರೆ ರಮೇಶ್. ಚಿತ್ರದ ಡೈರೆಕ್ಟರ್ ಅವರೇ. ಇದೇ ವಾರ ರಿಲೀಸ್ ಆಗುತ್ತಿರೊ 100 ಚಿತ್ರದ ಮೇಕಿಂಗ್ ಕೂಡಾ ಭರ್ಜರಿಯಾಗಿದೆ. ಚೇಸಿಂಗ್ ದೃಶ್ಯಗಳು ಉಸಿರು ಬಿಗಿ ಹಿಡಿದು ನೋಡುವಂತಿವೆ. ವೇಯ್ಟ್.. ಫಾರ್.. 100.