` ಮೆಲ್ಲ ಮೆಲ್ಲನೆ ಚಿಟ್ಟೆಗಳಾದ ರೈಡರ್ ನಿಖಿಲ್, ಕಾಶ್ಮೀರ ಪರದೇಸಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮೆಲ್ಲ ಮೆಲ್ಲನೆ ಚಿಟ್ಟೆಗಳಾದ ರೈಡರ್ ನಿಖಿಲ್, ಕಾಶ್ಮೀರ ಪರದೇಸಿ
ಮೆಲ್ಲ ಮೆಲ್ಲನೆ ಚಿಟ್ಟೆಗಳಾದ ರೈಡರ್ ನಿಖಿಲ್, ಕಾಶ್ಮೀರ ಪರದೇಸಿ

ಮೊನ್ನೆ ಮೊನ್ನೆಯಷ್ಟೇ ಡವ್ವಾ ಡವ್ವಾ.. ಎಂದು ಡಂಗುರ ಬಾರಿಸಿದ್ದ ನಿಖಿಲ್, ಈಗ ಚಿಟ್ಟೆಯಂತೆ ಹಾರಿದ್ದಾರೆ. ಮೆಲ್ಲನೆ..ಬೆರಳ ಬೆಸೆದು ನಡೆಯುವ ಚೂರು ದೂರಾ.. ಎಂದು ಹಿನ್ನೆಲೆಯಲ್ಲಿ ಸಂಜಿತ್ ಹೆಗ್ಡೆ ಹಾಡುತ್ತಿದ್ದರೆ.. ಅದು ಬೇರೆಯದೇ ಲೋಕಕ್ಕೆ ಹೊತ್ತೊಯ್ದಂತೆ.. ಲಡಾಖ್‍ನ ಸುಂದರ ಲೋಕದಲ್ಲಿ ನಿಖಿಲ್ ಮತ್ತು ಕಾಶ್ಮೀರ ಪರದೇಸಿ ಯುಗಳ ಗೀತೆ ಆಹಾ ಎನ್ನುವಂತಿದೆ. ರೈಡರ್ ಚಿತ್ರದ 2ನೇ ಹಾಡಿದು.

ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಕವಿರಾಜ್. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಡ್ಯುಯೆಟ್ ಸಾಂಗ್.. ಮೆಲ್ಲ ಮೆಲ್ಲನೆ ಹೃದಯಕ್ಕಿಳಿಯುತ್ತದೆ. ಚಂದ್ರು ಮನೋಹರನ್ ಮತ್ತು ಸುನಿಲ್ ಗೌಡ ನಿರ್ಮಾಣದ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಿಲೀಸ್ ಡೇಟ್ ಸದ್ಯದಲ್ಲೇ ಘೋಷಣೆಯಾಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery