` ದೃಶ್ಯಂ 2 ರಿಲೀಸ್ ಯಾವಾಗ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದೃಶ್ಯಂ 2 ರಿಲೀಸ್ ಯಾವಾಗ..?
Drishyam 2 Movie Image

ದೃಶ್ಯಂ 2 ರಿಲೀಸ್ ಆಗಲಿದೆ. ಡಿಸೆಂಬರಿನಲ್ಲೇ ತೆರೆಗೆ ಬರಲಿದೆ. ಚಿತ್ರಮಂದಿರಗಳಲ್ಲೆ ತೆರೆ ಕಾಣಲಿದೆ. ಎಲ್ಲವೂ ಈಗ ಅಂತಿಮವಾಗಿದೆ. ಆದರೆ.. ಯಾವಾಗ.. ಈ ಪ್ರಶ್ನೆ ಕಾಡೋಕೆ ಕಾರಣವೂ ಇದೆ. ದೃಶ್ಯಂ 2 ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ರವಿಚಂದ್ರನ್ ಯಶಸ್ವಿಯಾಗಿ ಕಮ್‍ಬ್ಯಾಕ್ ಮಾಡಿದ್ದ ಚಿತ್ರವಿದು. ದೇಶದ 7 ಭಾಷೆಗಳಲ್ಲಿ ರಿಲೀಸ್ ಆಗಿ, ಎಲ್ಲ ಕಡೆಯೂ ಸೂಪರ್ ಸಕ್ಸಸ್ ಕಂಡಿದ್ದ ಸಿನಿಮಾ ದೃಶ್ಯಂ. ಮಲಯಾಳಂನಲ್ಲಿ ದೃಶ್ಯಂನ ಸೀಕ್ವೆಲ್ ಒಟಿಟಿಗೆ ಬಂದು ಅಲ್ಲಿಯೂ ಹಿಟ್ ಆದ ನಂತರ ಕನ್ನಡಕ್ಕೆ ರೀಮೇಕ್ ಆಗಿದೆ.

ದೃಶ್ಯಂನಲ್ಲಿದ್ದ ಟೀಂ ದೃಶ್ಯಂ 2ನಲ್ಲಿಯೂ ಇದೆ. ರವಿಚಂದ್ರನ್ ಜೊತೆ ಈ ಬಾರಿ ಅನಂತ್‍ನಾಗ್ ಕೂಡಾ ಇದ್ದಾರೆ. ಪಿ.ವಾಸು ಡೈರೆಕ್ಷನ್ ಕಂಟಿನ್ಯೂ ಆಗಿದೆ. ಆದರೆ, ಡಿಸೆಂಬರ್‍ನಲ್ಲಿ ಯಾವ ವಾರ ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ಪ್ರಶ್ನೆ ಚಿತ್ರತಂಡವನ್ನೂ ಕಾಡುತ್ತಿದೆ.

ಡಿಸೆಂಬರ್ 3ಕ್ಕೆ ಶ್ರೀಮುರಳಿ-ಮಹೇಶ್ ಕಾಂಬಿನೇಷನ್‍ನ ಮದಗಜ, ಡಿಸೆಂಬರ್ 10ಕ್ಕೆ ಶರಣ್-ಪುಷ್ಕರ್ ಮಲ್ಲಿಕಾರ್ಜುನಯ್ಯ ಜೋಡಿಯ ಅವತಾರ್ ಪುರುಷ, ಡಿಸೆಂಬರ್ 31ಕ್ಕೆ ರಕ್ಷಿತ್ ಶೆಟ್ಟಿಯವರ ಚಾರ್ಲಿ 777 ರಿಲೀಸ್ ಆಗುತ್ತಿದೆ. ಇದರ ಗ್ಯಾಪಿನಲ್ಲಿ ಇನ್ನೂ ಕೆಲವು ಚಿತ್ರಗಳಿವೆ. ಅಲ್ಲಿಗೆ ದೃಶ್ಯಂ 2ಗೆ ಬಾಕಿ ಉಳಿಯೋದು ಡಿ.10 ಮತ್ತು ಡಿ.17. ಆ ದಿನವೇ ಸಿನಿಮಾ ರಿಲೀಸ್ ಆಗಬಹುದು.