ಒಂದು ಸಿನಿಮಾವನ್ನು ನೋಡೋಕೆ ರಾಜಕಾರಣಿಗಳಿಗೆ ಕರೆಯೋಕೆ ಬೇರೆಯದೇ ಕಾರಣಗಳಿರುತ್ತವೆ. ಸಿನಿಮಾದಲ್ಲಿರೋ ಸಾಮಾಜಿಕ ಸಂದೇಶವೋ.. ಕಥೆಯೋ.. ಯಾವುದಾದರೊಂದು ರೀತಿಯಲ್ಲಿ ಅದು ರಾಜಕಾರಣಿಗಳಿಗೆ ಕನೆಕ್ಟ್ ಆಗಬೇಕು. ಈಗ 100 ಸಿನಿಮಾವನ್ನು ನೋಡಿ ಬನ್ನಿ ಎಂದು ನಟ, ನಿರ್ದೇಶಕ ರಮೇಶ್ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.
100ನಲ್ಲಿರೋದು ಫ್ಯಾಮಿಲಿ ಥ್ರಿಲ್ಲರ್ ಸ್ಟೋರಿ. ಸೈಬರ್ ಕ್ರೈಂ ಮಿಸ್ಟರಿ. ಕುತೂಹಲಕ್ಕೋ.. ಥ್ರಿಲ್‍ಗೋಸ್ಕರವೋ.. ತರಲೆಗಾಗಿಯೋ.. ಮೊಬೈಲ್‍ನಲ್ಲಿ ಕಾಣಿಸಿದ ಅಪರಿಚಿತರಿಗೆ ಎಂಟ್ರಿ ಕೊಟ್ಟರೆ... ಆತ ಕ್ರಿಮಿನಲ್ ಆಗಿದ್ದರೆ.. ಏನೇನೆಲ್ಲ ಅನಾಹುತ ಎದುರಿಸಬೇಕಾಗಬಹುದು.. ಅದರಿಂದ ಹೊರಬರೋಕೆ ಏನೇನೆಲ್ಲ ಮಾಡಬೇಕಾಗಬಹುದು.. ಅನ್ನೋ ಕಥೆಯನ್ನ ಥ್ರಿಲ್ಲಿಂಗಾಗಿ ಹೇಳಿದ್ದಾರಂತೆ ರಮೇಶ್ ಅರವಿಂದ್.
ಹೀಗಾಗಿಯೇ ಈ ಸಿನಿಮಾ ನೋಡಿ ಬನ್ನಿ ಎಂದು ಗೃಹ ಸಚಿವರಿಗೆ ಕರೆದಿರೋದು. ಬಿಡುವು ಮಾಡಿಕೊಂಡು ಖಂಡಿತಾ ಸಿನಿಮಾ ನೋಡೋದಾಗಿ ಹೇಳಿದ್ದಾರಂತೆ ಹೋಮ್ ಮಿನಿಸ್ಟರ್.