ರಮೇಶ್ ನಟಿಸಿರುವ 100 ರಿಲೀಸ್ ಆಗುತ್ತಿದೆ. ಈ ವೇಳೆಯಲ್ಲೇ ರಚಿತಾ ರಾಮ್ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಸಿನಿಮಾದ ಬಗ್ಗೆ ಥ್ರಿಲ್ಲಿಂಗ್ ಆಗಿ ಕೆಲವೊಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಾನು ನೋಡಿರೋ ಡೈರೆಕ್ಟರುಗಳಲ್ಲೇ ಶಾಂತಮೂರ್ತಿ ನಿರ್ದೇಶಕರೆಂದರೆ ಅದು ರಮೇಶ್ ಸರ್. ಒಂದು ಬಾರಿಯೂ.. ಅದೇನೇ ಎಡವಟ್ಟುಗಳಾದರೂ.. ಸಿಟ್ಟು ಮಾಡಿಕೊಂಡವರಲ್ಲ. ನಾನು ಅವರ 100ನೇ ಸಿನಿಮಾ ಪುಷ್ಪಕವಿಮಾನದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದೆ. ಈಗ 100ನಲ್ಲಿ ಅವರಿಗೆ ತಂಗಿ ಎಂದಿದ್ದಾರೆ ರಚಿತಾ ರಾಮ್.
ಇದು ಸೈಬರ್ ಕ್ರೈಂ ಬ್ಯಾಕ್‍ಗ್ರೌಂಡ್ ಸ್ಟೋರಿ. ಸಿನಿಮಾದಲ್ಲಿ ನಿರ್ದೇಶಕ ಕಂ ಹೀರೋ ರಮೇಶ್ ಅವರಿಂದ ಹಿಡಿದು ಎಲ್ಲರೂ ಸಿನಿಮಾ ಪ್ಯಾಷನೇಟ್ ಇರೋ ವ್ಯಕ್ತಿಗಳೇ ಇದ್ದರು. ಜೊತೆಗೆ ಪ್ರೊಡ್ಯೂಸರ್ ರಮೇಶ್ ರೆಡ್ಡಿ. ಅವರಿಗೆ ಸಿನಿಮಾ ಅನ್ನೋದು ಬಿಸಿನೆಸ್ ಅನ್ನೋದಕ್ಕಿಂತ ಹೆಚ್ಚಾಗಿ ಪ್ಯಾಷನ್. ಅದು ಚಿತ್ರದ ಔಟ್‍ಪುಟ್‍ನಲ್ಲಿಯೂ ಕಾಣಿಸುತ್ತೆ. ಒಂದೇ ಒಂದು ಸಣ್ಣ ಅಡ್ಡಿ ಆತಂಕಗಳಿಲ್ಲದೆ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಎಲ್ಲ ಕ್ರೆಡಿಟ್ಟನ್ನೂ ನಿರ್ಮಾಪಕರಿಗೇ ನೀಡಿದ್ದಾರೆ ರಚಿತಾ ರಾಮ್.