ಡಿಸೆಂಬರ್ 3ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾ ಮದಗಜ. ಶ್ರೀಮುರಳಿ, ಆಶಿಕಾ ರಂಗನಾಥ್, ಅಯೋಗ್ಯ ಮಹೇಶ್ ಕಾಂಬಿನೇಷನ್ನಿನ ಸಿನಿಮಾದಲ್ಲಿ ಜಗಪತಿ ಬಾಬು ಅವರದ್ದು ಪ್ರಮುಖ ಪಾತ್ರ. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಸಿನಿಮಾ ಇದು. ಸ್ಸೋ.. ಬಜೆಟ್ಟೂ ದೊಡ್ಡದು. ಕ್ಯಾನ್‍ವಾಸೂ ದೊಡ್ಡದು. ಅದ್ಧೂರಿತನವನ್ನು ಅರೆದು ಕುಡಿದು ಸಿದ್ಧವಾಗಿರೋ ಚಿತ್ರ ಮದಗಜ. ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದೆ ಚಿತ್ರತಂಡ.
ಕಿನ್ನಾಲ್ ರಾಜ್ ಬರೆದಿರೋ ಹಾಡಿಗೆ, ಭರ್ಜರಿ ಮ್ಯೂಸಿಕ್ ಕೊಟ್ಟಿರೋದು ರವಿ ಬಸ್ರೂರ್. ಸಂತೋಷ್ ವೆಂಕಿಯ ವಾಯ್ಸ್, ಶ್ರೀಮುರಳಿಯ ಕಂಚಿನ ಕಂಠಕ್ಕೆ ಹೇಳಿ ಮಾಡಿಸಿದಂತೆ ಸೂಟ್ ಆಗಿದೆ. ಹಾಡು ಕೊಡುವ ಫೀಲ್‍ನ್ನು ನೋಡಿಯೇ ಥ್ರಿಲ್ಲಾಗಬೇಕು. ತಮಿಳು, ತೆಲುಗಿನಲ್ಲೂ ಬರುತ್ತಿರೋ ಮದಗಜ ರಿಲೀಸ್ ಆಗೋಕೂ ಮೊದಲೇ ಹವಾ ಎಬ್ಬಿಸಿದೆ.