` ಸಖತ್ ನಿರ್ಮಾಪಕರೇ ಆರ್‍ಆರ್‍ಆರ್ ವಿತರಕರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಖತ್ ನಿರ್ಮಾಪಕರೇ ಆರ್‍ಆರ್‍ಆರ್ ವಿತರಕರು..!
RRR Movie Image

ಆರ್‍ಆರ್‍ಆರ್. 2022ರಲ್ಲಿ ರಿಲೀಸ್ ಆಗಲಿರೋ ಸಖತ್ ಸಿನಿಮಾ. ಸಖತ್ ಸಿನಿಮಾ ಯಾಕೇ ಅಂದ್ರೆ ಅದು ರಾಜಮೌಳಿ, ರಾಮ್ ಚರಣ್ ತೇಜ, ಎನ್‍ಟಿಆರ್, ಅಜಯ್ ದೇವಗನ್, ಅಲಿಯಾ ಭಟ್ ನಟಿಸಿರೋ ಸಿನಿಮಾ. ದೇಶಾದ್ಯಂತ ಕ್ರೇಜ್ ಸೃಷ್ಟಿಸಿರೋ ಆರ್‍ಆರ್‍ಆರ್ ಸಿನಿಮಾದ ಕನ್ನಡ ಮತ್ತು ಕರ್ನಾಟಕ ವಿತರಣೆಯ ಹಕ್ಕನ್ನು ಪಡೆದುಕೊಂಡಿರೋದು ಸಖತ್ ಕೆವಿಎನ್ ಪ್ರೊಡಕ್ಷನ್ಸ್.

ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಸಿಂಪಲ್ ಸುನಿ ಕಾಂಬಿನೇಷನ್ನಿನ ಸಖತ್ ಸಿನಿಮಾ ನಿರ್ಮಾಣ ಮಾಡಿರೋ ಅದೇ ಕೆವಿಎನ್ ಪ್ರೊಡಕ್ಷನ್ಸ್, ಈಗ ಆರ್‍ಆರ್‍ಆರ್ ಚಿತ್ರವನ್ನೂ ರಿಲೀಸ್ ಮಾಡುತ್ತಿದೆ. ಅಪ್ಪಟ ಪ್ರೊಫೆಷನಲ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಕೆವಿಎನ್ ಪ್ರೊಡಕ್ಷನ್ಸ್, ಆರ್‍ಆರ್‍ಆರ್ ಒಪ್ಪಂದವನ್ನು ಮುಕ್ತಾಯಗೊಳಿಸಿದೆ. ಇತ್ತ ಕರ್ನಾಟಕದಲ್ಲಿ ಸಖತ್ ರಿಲೀಸ್ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿದೆ.