` ಸಾರಿ : ರಾಗಿಣಿ ದ್ವಿವೇದಿ ರಿಟನ್ರ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಾರಿ : ರಾಗಿಣಿ ದ್ವಿವೇದಿ ರಿಟನ್ರ್ಸ್
Ragini Dwivedi

ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದ ರಾಗಿಣಿ ದ್ವಿವೇದಿ, ಅದಾದ ಮೇಲೆ ಕೆಲವು ಚಿತ್ರಗಳಿಗೆ ಸಹಿ ಮಾಡಿದ್ದರು. ಚಿತ್ರರಂಗಕ್ಕೆ ವಾಪಸ್ ಬರುವ ಸುಳಿವು ಕೊಟ್ಟಿದ್ದರು. ಈಗ ಬಂದೇಬಿಟ್ಟಿದ್ದಾರೆ. ಸಾರಿ - ಕರ್ಮ ರಿಟನ್ರ್ಸ್ ಅನ್ನೋ ಚಿತ್ರದಲ್ಲಿ ಅವರೀಗ ಹೀರೋಯಿನ್.

ಕಿಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರಕ್ಕೆ ಬ್ರಹ್ಮ ನಿರ್ದೇಶಕ. ಕೆನಡಾದ ನವೀನ್ ಕುಮಾರ್ ನಿರ್ಮಾಪಕ. ಅಫ್ಜಲ್ ಎಂಬುವವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಸಿದ್ಧವಾಗಲಿದೆ.

ಶೀರ್ಷಿಕೆಯಲ್ಲಿಯೇ ಕಥೆ ಇದೆ. ನನಗಿಲ್ಲಿ ಎರಡು ಶೇಡ್‍ಗಳಿವೆ. ಡಿಫರೆಂಟ್ ಆ್ಯಕ್ಷನ್ ಸೀಕ್ವೆನ್ಸ್ ಕೂಡಾ ಇದೆ ಎಂದಿದ್ದಾರೆ ರಾಗಿಣಿ.

ಸದ್ಯಕ್ಕೆ ರಾಗಿಣಿಗೆ ಕೈತುಂಬಾ ಚಿತ್ರಗಳಿವೆ. ಕರ್ವ 3, ಜಾನಿ ವಾಕರ್, ರಾಣಾ ಚಿತ್ರಗಳ ಚಿತ್ರೀಕರಣವೂ ನಡೆಯುತ್ತಿದೆ. ಈಗ ಸಾರಿ - ಕರ್ಮ ರಿಟನ್ರ್ಸ್.