ಜೋಗಿ ಪ್ರೇಮ್ ಮತ್ತೊಮ್ಮೆ ಲವ್ ಸ್ಟೋರಿ ಮೂಲಕ ಕಿಕ್ಕೇರಿಸೋಕೆ ಬರುತ್ತಿದ್ದಾರೆ. ಬಹುಶಃ ಎಕ್ಸ್‍ಕ್ಯೂಸ್ ಮಿ ನಂತರ ಪ್ರೇಮ್ ಸಿನಿಮಾಗಳಲ್ಲಿ ಲವ್ ಸ್ಟೋರಿ ಇರುತ್ತಾದರೂ, ಲವ್ ಸ್ಟೋರಿಯನ್ನೇ ಸಿನಿಮಾ ಮಾಡಿರಲಿಲ್ಲ. ಅದೆಲ್ಲವನ್ನೂ ಮೀರಿಸುವಂತೆ ಏಕ್ ಲವ್ ಯಾ ಚಿತ್ರದ ಮೂಲಕ ಬರುತ್ತಿರೋ ಪ್ರೇಮ್, ಮತ್ತೊಮ್ಮೆ ಹಾಡುಗಳ ಗುಂಗು ಹಿಡಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಹಾಡುಗಳು ಪ್ರೇಮಿಗಳ ಹೃದಯದಲ್ಲೇ ಟೆಂಟ್ ಹಾಕಿವೆ. ಈಗ 3ನೇ ಹಾಡು ಬರುತ್ತಿದೆ.
ಎಣ್ಣೆಗೂ.. ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ.. ಅನ್ನೋ ಹಾಡಿದು. ಹಾಡಿನಲ್ಲಿ ಎಣ್ಣೆ ಬಾಟಲಿಯನ್ನು ಬಾಯ್ತುಂಬಾ ಇಟ್ಟುಕೊಂಡು ಮತ್ತೇರಿಸೋದು ಡಿಂಪಲ್ ಕ್ವೀನ್. ಜೊತೆಯಲ್ಲಿರೋದು ಚಿತ್ರದಿಂದ ಹೀರೋ ಆಗಿ ಚಿತ್ರರಂಗಕ್ಕೆ ಬರುತ್ತಿರೊ ರಕ್ಷಿತಾ ಪ್ರೇಮ್ ತಮ್ಮ ರಾಣಾ. ಹಾಡಿಗೆ ಅಷ್ಟೇ ಕಿಕ್ಕು ಕೊಟ್ಟಿರೋದು ಮಂಗ್ಲಿ. 4 ಭಾಷೆಗಳಲ್ಲಿ ರಿಲೀಸ್ ಆಗಲಿರೋ ಚಿತ್ರದ ಈ ಹಾಡು ರಿಲೀಸ್ ಆಗೋದು ನವೆಂಬರ್ 12ರ ಸಂಜೆ 5 ಗಂಟೆಗೆ.