ಸಿಂಪಲ್ ಸುನಿ ಗೊತ್ತು. ಇದ್ಯಾರು ಸಖತ್ ಸುನಿ ಎನ್ನಬೇಡಿ. ಈಗ ರಿಲೀಸ್ ಆಗ್ತಿರೋ ಸಖತ್ ಸಿನಿಮಾದ ಸೃಷ್ಟಿಕರ್ತ ಇವರೇ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಸಖತ್. ನಿಶ್ವಿಕಾ ನಾಯ್ಡು ಮತ್ತು ಸುರಭಿ ನಾಯಕಿಯಾಗಿರೋ ಚಿತ್ರದಲ್ಲಿ ಗಣೇಶ್ ಕಟಕಟೆಯಲ್ಲಿರೋದೇ ಹೈಲೈಟ್. ಕಣ್ಣು ಕಾಣುತ್ತೊ.. ಕಾಣಲ್ವೋ.. ಅದನ್ನೆಲ್ಲ ಸಖತ್ ಆಗಿ ಚಿತ್ರಮಂದಿರದಲ್ಲೇ ತೋರಿಸ್ತಿದ್ದಾರೆ ಸಖತ್ ಸುನಿ.
ಆ ಚಿತ್ರದ ಪ್ರಚಾರಕ್ಕಾಗಿಯೇ ಹೀಗೆ ಕಟಕಟೆಯೊಳಗೆ ನಿಂತಿರೋದು. ಸಿನಿಮಾ ರಿಲೀಸ್ ಆಗೋ ಪ್ರತಿ ಮಾಲ್ಗಳಲ್ಲೂ ಇಂಥಾದ್ದೊಂದು ಕಟಕಟೆ ನಿರ್ಮಿಸುತ್ತಿದ್ದಾರೆ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ನ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್.