ಭಜರಂಗಿ 2 ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಯಶ್ ಹೇಳಿದ ಮಾತುಗಳಿವು. ನನಗೆ ಶಿವಣ್ಣ ಇಷ್ಟ. ಭಜರಂಗಿ ನೋಡೋಕೆ ತ್ರಿವೇಣಿ ಥಿಯೇಟರಿಗೆ ಹೋಗಿದ್ದೆ. ಫ್ಯಾನ್ ಆಗಿ ಹೋಗಿದ್ದೆ. ಇವತ್ತು ಭಜರಂಗಿ 2 ರಿಲೀಸ್‍ಗೆ ಬಂದಿದ್ದೇನೆ. ಈಗಲೂ ಫ್ಯಾನ್ ಆಗಿಯೇ ಬಂದಿದ್ದೇನೆ ಎಂದ ಯಶ್, ಶಿವಣ್ಣ ನಾನು ಹುಟ್ಟೋಕೆ ಮೊದಲಿನಿಂದಲೂ ಸಿನಿಮಾ ಮಾಡ್ತಾ ಬಂದಿದ್ದಾರೆ.
ಇವರ ನಡವಳಿಕೆಗಳನ್ನ ನೋಡಿ ನಾವೆಲ್ಲ ಕಲೀಬೇಕು. ಅಮ್ಮನಿಗೆ ಡಾ.ರಾಜ್‍ಕುಮಾರ್ ಅಂದ್ರೆ ತುಂಬಾ ಇಷ್ಟ. ನನಗೆ ಅಪ್ಪು ತರಾ ಡ್ಯಾನ್ಸ್, ಫೈಟ್ ಮಾಡೋಕೆ ಇಷ್ಟ. ಅದಕ್ಕಾಗಿಯೇ ಇಂಡಸ್ಟ್ರಿಗೆ ಬಂದೆ ಎಂದ ಯಶ್ ಭಜರಂಗಿ 2 ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.