Print 
zameer ahmed khan, benaras,

User Rating: 0 / 5

Star inactiveStar inactiveStar inactiveStar inactiveStar inactive
 
ಜಮೀರ್ ಪುತ್ರನ ಬನಾರಸ್ ಆಡಿಯೋ ಭಾರಿ ಮೊತ್ತಕ್ಕೆ ಸೇಲ್
ಜಮೀರ್ ಪುತ್ರನ ಬನಾರಸ್ ಆಡಿಯೋ ಭಾರಿ ಮೊತ್ತಕ್ಕೆ ಸೇಲ್

ಬನಾರಸ್. ಸ್ಪೆಷಲ್ ಸಿನಿಮಾಗಳಿಂದಲೇ ಖ್ಯಾತರಾದ ಜಯತೀರ್ಥ ನಿರ್ದೇಶನದ ಸಿನಿಮಾ. ಜಾಯೇದ್ ಖಾನ್ ಚಿತ್ರದ ಹೀರೋ. ಸೋನಲ್ ಮಂಥೆರೋ ನಾಯಕಿ. ಚಿತ್ರದ ಬಹುತೇಕ ಚಿತ್ರೀಕರಣ ನಡೆದಿರೋದು ಹಿಂದೂಗಳ ಪುಣ್ಯ ಕ್ಷೇತ್ರ ಕಾಶಿಯಲ್ಲಿ.

ಚಿತ್ರದ ಹೀರೋ ಜಾಯೇದ್ ಖಾನ್ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಪುತ್ರ. ಈಗ ಚಿತ್ರದ ಆಡಿಯೋ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿರೋ ಸುದ್ದಿ ಬಂದಿದೆ. ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಬನಾರಸ್ ಚಿತ್ರಕ್ಕೆ ಸಂಗೀತ ನೀಡಿರೋದು ಅಜನೀಶ್ ಲೋಕನಾಥ್. ಹೊಸಬರ ಚಿತ್ರವೊಂದು ಈ ಮೊತ್ತಕ್ಕೆ ಮಾರಾಟವಾಗಿರೋದು ದಾಖಲೆ ಎನ್ನುತ್ತಿದೆ ಚಿತ್ರತಂಡ. ಆದರೆ, ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಗುಟ್ಟು ಬಿಟ್ಟುಕೊಟ್ಟಿಲ್ಲ. ಆಡಿಯೋ ಖರೀದಿಸಿರುವುದು ಲಹರಿ ಮ್ಯೂಸಿಕ್ ಮತ್ತು ಟಿ ಸಿರೀಸ್. ಏಕೆಂದರೆ ಬನಾರಸ್ 3 ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ.