` ಆದಿತಿ ಪ್ರಭುದೇವ ಐಪಿಎಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆದಿತಿ ಪ್ರಭುದೇವ ಐಪಿಎಸ್
Aditi Prabhudeva

ಶ್ಯಾನೆ ಟಾಪ್ ಚೆಲುವೆ ಆದಿತಿ ಪ್ರಭುದೇವ ಈಗ ಐಪಿಎಸ್ ಆಫೀಸರ್ ಆಗಿದ್ದಾರೆ. ಒನ್ಸ್ ಎಗೇಯ್ನ್.. ರೀಲಿನಲ್ಲೇ. ಇನ್ನೂ ಹೆಸರಿಡದ ಹೊಸ ಚಿತ್ರವೊಂದರಲ್ಲಿ ಆದಿತಿ ಪ್ರಭುದೇವ ಐಪಿಎಸ್ ಆಫೀಸರ್.

ಚಿಕ್ಕಂದಿನಲ್ಲಿ ನನಗೆ ಪೊಲೀಸ್ ಯೂನಿಫಾರ್ಮ್ ಅಂದ್ರೆ ಒಂಥರಾ ಆಕರ್ಷಣೆ. ಪೊಲೀಸ್ ಆಗೋ ಕನಸು ಚಿಕ್ಕವಳಿದ್ದಾಗ ನನಗೂ ಇತ್ತು. ಆಗಲಿಲ್ಲ. ಸಿನಿಮಾದಲ್ಲಿ ಸಿಕ್ಕರೆ ಬಿಡಬಾರದು ಎಂದುಕೊಂಡಿದ್ದೆ. ಸಿಕ್ತು, ತಕ್ಷಣ ಒಪ್ಪಿಕೊಂಡೆ ಅಂತಾರೆ ಆದಿತಿ.

ಸತ್ಯ ಘಟನೆ ಆಧಾರಿತ ಚಿತ್ರಕ್ಕೆ ಜೀವ ಎಂಬುವವರು ಡೈರೆಕ್ಟರ್. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರೋ ಜೀವ ಅವರಿಗೆ ಇದು ಸೆಕೆಂಡ್ ಮೂವಿ. ಭುಜಂಗ ಅನ್ನೋ ಸಿನಿಮಾ ಡೈರೆಕ್ಟ್ ಮಾಡಿದ್ದರು. ಪವನ್ ಎಂಬುವವರು ಹೀರೋ.

ಲೈಟಾಗಿ ಒಂದು ಲವ್ ಸ್ಟೋರಿಯೂ ಇದೆ. ಆದರೆ, ಚಿತ್ರ ಸಸ್ಪೆನ್ಸ್ ಥ್ರಿಲ್ಲರ್. ಆ್ಯಕ್ಷನ್ ದೃಶ್ಯಗಳಲ್ಲಿ ಸ್ಟಂಟ್ ಇಲ್ಲದೆ ಮಾಡಿದ್ದೇನೆ. ಬಾಡಿ ಡಬಲ್ ಬಳಸಿಲ್ಲ. ಅಸಿಸ್ಟೆಂಟ್ ಸ್ಟಂಟ್ ಮ್ಯಾನ್‍ಗಳೊಂದಿಗೆ ಪ್ರಾಕ್ಟೀಸ್ ಮಾಡಿ ಸ್ಟಂಟ್ ಮಾಡಿದ್ದೇನೆ ಎಂದು ಖುಷಿಯಾಗಿದ್ದಾರೆ ಆದಿತಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery