ಕಬ್ಜ ಚಿತ್ರದ ತಾರಾಬಳಗ ಹಿಗ್ಗುತ್ತಲೇ ಸಾಗಿದೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಜೊತೆಗೆ ಈಗಾಗಲೇ ನವಾಬ್ ಶಾ, ಕಾಮರಾಜನ್, ಜಗಪತಿ ಬಾಬು, ರಾಹುಲ್ ಬೋಸ್, ಪ್ರಮೋದ್ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಕೋಟಾ ಶ್ರೀನಿವಾಸ್, ಕಾಟ್ ರಾಜ, ಸುಬ್ಬರಾಜು.. ಹೀಗೆ ಬೃಹತ್ ತಾರಾಬಳಗವೇ ಇದೆ. ಆ ತಾರಾಗಣಕ್ಕಿಗ ಕೆಜಿಎಫ್‍ನ ರಾಜೇಂದ್ರ ದೇಸಾಯಿ ಸೇರಿದ್ದಾರೆ.
ರಾಜೇಂದ್ರ ದೇಸಾಯಿ ಪಾತ್ರದಿಂದ ಖ್ಯಾತರಾದ ಲಕ್ಕೀ ಲಕ್ಷ್ಮಣ್, ಈಗ ಆರ್.ಚಂದ್ರು ಕನಸಿನ ಕಬ್ಜ ಕೋಟೆಗೆ ಎಂಟ್ರಿ ಕೊಟ್ಟಿದ್ದಾರೆ. ಮಿನರ್ವ ಮಿಲ್‍ನಲ್ಲಿ ಚಿತ್ರದ 42 ದಿನಗಳ ಶೂಟಿಂಗ್ ಮುಗಿದಿದೆ. ಇನ್ನೂ 75 ದಿನಗಳ ಶೂಟಿಂಗ್ ಬಾಕಿ ಇದೆ.