Print 
vijay sankeshwar, actor nihaal, vrl,

User Rating: 0 / 5

Star inactiveStar inactiveStar inactiveStar inactiveStar inactive
 
ವಿಜಯ ಸಂಕೇಶ್ವರರ ಬಯೋಪಿಕ್`ಗೆ ಮುಹೂರ್ತ
ವಿಜಯ ಸಂಕೇಶ್ವರರ ಬಯೋಪಿಕ್`ಗೆ ಮುಹೂರ್ತ

ಅಪ್ಪ ಮಾಡುತ್ತಿದ್ದ ವ್ಯವಹಾರ ಬಿಟ್ಟು ಬೇರೆ ಬಿಸಿನೆಸ್ ಮಾಡಬೇಕು ಎಂದು 17 ವರ್ಷದವರಿದ್ದಾಗಲೇ ನಿರ್ಧರಿಸಿದ ಹುಡುಗ, ಕೈ ಹಾಕಿದ್ದು ಲಾರಿ ಬಿಸಿನೆಸ್‍ಗೆ. ಏನು ಮಾಡ್ತಾ ಇದ್ದೀಯಾ.. ಇದೆಲ್ಲ ನಿಮ್ಮಂತವರಿಗಲ್ಲ.. ಸುಮ್ಮನೆ ಅಪ್ಪನ ವ್ಯವಹಾರ ನೋಡಿಕೊ ಎಂದು ಬೈದವರಿಗೆ `ನಾನು ಸಾಯುವ ಮುನ್ನ ಮನೆಯ ಮುಂದೆ 4 ಲಾರಿ ನಿಲ್ಲಿಸಿ ಸಾಯುತ್ತೇನೆ' ಎಂದು ಸವಾಲು ಹಾಕಿದ್ದ ಹುಡುಗ ವಿಜಯ ಸಂಕೇಶ್ವರ.

ವಿಜಯ ಸಂಕೇಶ್ವರರ ಮನೆ ಮುಂದೆ 4 ಟ್ರಕ್ ನಿಂತಾಗ ಹೆಮ್ಮೆಯಾಯಿತಂತೆ. ಟ್ರಕ್ ಸಂಖ್ಯೆ 5 ದಾಟಿದ ಮೇಲೆ ಲೆಕ್ಕ ಹಾಕೋದು ಮತ್ತು ಟಾರ್ಗೆಟ್ ಇಟ್ಟುಕೊಳ್ಳೋದು ಎರಡನ್ನೂ ಬಿಟ್ಟ ವಿಜಯ ಸಂಕೇಶ್ವರರ ವಿಆರ್‍ಎಲ್ ಉದ್ಯಮಕ್ಕೆ ಈಗ ದೇಶದಲ್ಲೇ ದೊಡ್ಡ ಹೆಸರಿದೆ. ಅವರ ಬಳಿ ಇರೋ ಟ್ರಕ್‍ಗಳ ಸಂಖ್ಯೆ ಈಗ 5031. ಅವರ ಜೀವನ ಚರಿತ್ರೆಯೇ ಈಗ ಸಿನಿಮಾ ಆಗುತ್ತಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲಿಸ್ ಆಗಲಿರೋ ಸಂಕೇಶ್ವರರ ಬಯೋಪಿಕ್ ಸಿನಿಮಾ ಟೈಟಲ್ ವಿಜಯಾನಂದ. ಚಿತ್ರಕ್ಕೆ ರಿಷಿಕಾ ಶರ್ಮಾ ನಿರ್ದೇಶಕಿಯಾದರೆ, ವಿಆರ್‍ಎಲ್ ಸಂಸ್ಥೆ ಈ ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದೆ. ಆನಂದ ಸಂಕೇಶ್ವರ ಚಿತ್ರದ ನಿರ್ಮಾಪಕರು.

ವಿಜಯ್ ಸಂಕೇಶ್ವರರ ಪಾತ್ರದಲ್ಲಿ ನಿಹಾಲ್ ನಟಿಸುತ್ತಿದ್ದರೆ, ವಿಜಯ್ ಸಂಕೇಶ್ವರರ ತಂದೆ ಬಸವಣ್ಣೆಪ್ಪ ಗುರುಲಿಂಗಪ್ಪ ಸಂಕೇಶ್ವರರ ಪಾತ್ರಧಾರಿಯಾಗಿರೋದು ಅನಂತ ನಾಗ್. ತಾಯಿಯ ಪಾತ್ರದಲ್ಲಿ ವಿನಯ್ ಪ್ರಕಾಶ್ ಇದ್ದಾರೆ. ಪ್ರಮುಖ ಪಾತ್ರದಲ್ಲಿ ರವಿಚಂದ್ರನ್ ಕೂಡಾ ನಟಿಸುತ್ತಿದ್ದಾರಂತೆ. ಭರತ್ ಬೋಪಣ್ಣ, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಶೈನ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಚಿತ್ರದ ಮುಹೂರ್ತದಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ವಿಜಯ ಸಂಕೇಶ್ವರ, ಲಲಿತ ಸಂಕೇಶ್ವರ, ಗೋಲ್ಡನ್ ಸ್ಟಾರ್ ಗಣೇಶ್, ಗಾಯತ್ರಿ ಅನಂತನಾಗ್.. ಸೇರಿದಂತೆ ಹಲವರು ಚಿತ್ರಕ್ಕೆ ಶುಭ ಹಾರೈಸಿದ್ರು.