Print 
soundarya jagadish,

User Rating: 0 / 5

Star inactiveStar inactiveStar inactiveStar inactiveStar inactive
 
ಕಸ ಬಿದ್ದಿದ್ದಕ್ಕೆ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಗೂಂಡಾಗಿರಿ ಮಾಡಿದ್ರಾ..?
Soundarya Jagadeesh

ಸೌಂದರ್ಯ ಜಗದೀಶ್, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲೊಬ್ಬರು. ಮಸ್ತ್ ಮಜಾ ಮಾಡಿ, ಸ್ನೇಹಿತರು, ಅಪ್ಪು ಮತ್ತು ಪಪ್ಪು, ರಾಮ್‍ಲೀಲಾ .. ಮೊದಲಾದ ಚಿತ್ರಗಳನ್ನು ನಿರ್ಮಿಸಿದವರು. ಇತ್ತೀಚೆಗೆ ಡ್ರಗ್ಸ್ ಕೇಸ್‍ನಲ್ಲೂ ವಿಚಾರಣೆ ಎದುರಿಸಿದ್ದ ಸೌಂದರ್ಯ ಜಗದೀಶ್, ಈ ಬಾರಿ ಮಗನ ಗೂಂಡಾಗಿರಿ ಪ್ರಕರಣದಿಂದಾಗಿ ಸುದ್ದಿಯಲ್ಲಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಸೌಂದರ್ಯ ಜಗದೀಶ್ ಮನೆಯಿದೆ.   ಅವರ ಪುತ್ರ ಸ್ನೇಹಿತ್. ಸ್ನೇಹಿತ್ ತಮ್ಮ ಮನೆಯ ಕೆಲಸದವರು ಮತ್ತು ಬೌನ್ಸರುಗಳೊಂದಿಗೆ ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾದ ರಜತ್ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋದು ಆರೋಪ. ಕಸ ಗುಡಿಸುವಾಗ ದೂಳು ಬಿದ್ದ ವಿಚಾರಕ್ಕೆ ಶುರುವಾದ ಜಗಳ, ಹೊಡೆದಾಟದ ಹಂತಕ್ಕೆ ಹೋಗಿದೆ. ಸ್ನೇಹಿತ್ ಮತ್ತು ಬೌನ್ಸರ್‍ಗಳು ರಜತ್ ಮನೆಗೆ ನುಗ್ಗಿ ಮನೆಯಲ್ಲಿದ್ದ ಕೆಲಸದ ಹೆಂಗಸರು ಮತ್ತು ಮನೆಯವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಸ್ನೇಹಿತ್ ಗ್ಯಾಂಗ್ ಮನೆಯೊಳಗೆ ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿವೆ. ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಜಗದೀಶ್ ಆರೋಪಿ ನಂ.7 ಆಗಿದ್ದರೆ, ಸ್ನೇಹಿತ್ ಆರೋಪಿ ನಂ.8. ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.