ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ಹುಡುಗಿ ಮೇಘಾ ಶೆಟ್ಟಿ. ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವ ಮೇಘಾ ಶೆಟ್ಟಿ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಓಕೆ ಎಂದಿದ್ದಾರೆ.
ಜಿಲ್ಕಾ ಚಿತ್ರದ ಮೂಲಕ ಗಮನ ಸೆಳೆದ ನಟ ಕವೀಶ್ ಶೆಟ್ಟಿ ಚಿತ್ರಕ್ಕೆ ಈಗ ಮೇಘಾ ಶೆಟ್ಟಿ ಹೀರೋಯಿನ್. ಸಡಗರ ರಾಘವೇಂದ್ರ ಎಂಬುವವರು ನಿರ್ದೇಶಿಸುತ್ತಿರೋ ಚಿತ್ರಕ್ಕೆ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಮರಾಠಿಯಲ್ಲೂ ಬರುತ್ತಿದೆ. ಕ್ಲಾಸಿಕ್ ಸ್ಟುಡಿಯೋ ಮತ್ತು ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮೂಲಕ ಉಡುಪಿಯವರೇ ಆದ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಶೀಘ್ರದಲ್ಲೇ ಚಿತ್ರದ ಉಳಿದ ವಿವರಗಳು ಹೊರಬೀಳಲಿವೆ