ಚಮಕ್ ನಂತರ ಸಿಂಪಲ್ ಸುನಿ ಮತ್ತು ಗಣೇಶ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಸಖತ್. ಗಣೇಶ್ ಪಾತ್ರದ ಹೆಸರು ಬಾಲು. ಗಣೇಶ್ಗೆ ಸಖತ್ತಾಗಿ ಜೋಡಿಯಾಗಿರೋದು ನಿಶ್ವಿಕಾ ನಾಯ್ಡು. ಅವರ ಪಾತ್ರದ ಹೆಸರು ನಕ್ಷತ್ರ. ನಿಶ್ವಿಕಾ ಟೀಚರ್ ಆದರೆ, ಗಣೇಶ್ ರಿಯಾಲಿಟಿ ಶೋ ಸಿಂಗರ್.
ಈಗ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಸುನಿ. ನಿಶಾ ವೆಂಕಟ್ ಸೋಣಂಕಿ ಮತ್ತು ಸುಪ್ರೀತ್ ನಿರ್ಮಾಣದ ಚಿತ್ರದ ಟೀಸರ್ ಅಕ್ಟೋಬರ್ 24ರಂದು ರಿಲೀಸ್ ಆಗಲಿದೆ. ಬೆಳಗ್ಗೆ 11 ಗಂಟೆ 24 ನಿಮಿಷಕ್ಕೆ.
ಅಂದಹಾಗೆ ಸಿಂಪಲ್ ಸುನಿ ಕ್ರಿಕೆಟ್ ಪ್ರೇಮಿ. ಅದೇ ಅಕ್ಟೋಬರ್ 24ರಂದು ಇಂಡಿಯಾ ಪಾಕಿಸ್ತಾನ ವಿಶ್ವಕಪ್ ಪಂದ್ಯವೂ ಇದೆ. ಅದನ್ನೇನಾದರೂ ಟೀಸರಿನಲ್ಲಿ ತರುತ್ತಾರಾ..? ಸಿಂಪಲ್ ಸುನಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.