` ಜೇಕಬ್ ವರ್ಗಿಸ್ ಸಿನಿಮಾಗೆ ಪುನೀತ್ ಗ್ರೀನ್ ಸಿಗ್ನಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜೇಕಬ್ ವರ್ಗಿಸ್ ಸಿನಿಮಾಗೆ ಪುನೀತ್ ಗ್ರೀನ್ ಸಿಗ್ನಲ್
Jacob Verghese, Puneeth Rajkumar

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿತ್ರಗಳಲ್ಲಿಯೇ ಪೃಥ್ವಿ ಬೇರೆಯದೇ ಜಾನರ್ ಸಿನಿಮಾ. ಆ ಚಿತ್ರ ಅತ್ತ ಬಾಕ್ಸಾಫೀಸ್‍ನಲ್ಲಿ ಗೆದ್ದಿದ್ದಷ್ಟೇ ಅಲ್ಲ, ರಾಜ್ಯ ಪ್ರಶಸ್ತಿಯನ್ನೂ ಗೆದ್ದಿತ್ತು. ಮಾಜಿ ಪ್ರಧಾನಿ ದೇವೇಗೌಡರು ಆ ಚಿತ್ರವನ್ನು ಥಿಯೇಟರಿಗೆ ಬಂದು ನೋಡಿ ಮೆಚ್ಚಿದ್ದರು. ಆದರೆ, ಜೇಕಬ್ ಮತ್ತು ಪುನೀತ್ ಜೋಡಿಯ ಇನ್ನೊಂದು ಚಿತ್ರ ಶುರುವಾಗಲೇ ಇಲ್ಲ. ಆ ನಿರೀಕ್ಷೆಗೆ ದಶಕದ ನಂತರ ಜೀವ ಬಂದಿದೆ.

ಜೇಕಬ್ ರೆಡಿ ಮಾಡಿರುವ ಕಥೆಗೆ ಪುನೀತ್ ಓಕೆ ಎಂದಿದ್ದಾರೆ. ಕಥೆ ಫೈನಲ್ ಆಗಿದೆ. ಚಿತ್ರಕಥೆ ಕೆಲಸ ನಡೆಯುತ್ತಿದೆ. ಫೆಬ್ರವರಿಯಲ್ಲಿ ಶೂಟಿಂಗ್ ಶುರುವಾಗಲಿದೆ. ಇದರ ಮಧ್ಯೆ ಪುನೀತ್  ಚೇತನ್ ಕುಮಾರ್ ಅವರ ಜೇಮ್ಸ್ ಮುಗಿಸಬೇಕು. ಅತ್ತ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಮುಗಿಯಬೇಕು. ಕ್ಯೂನಲ್ಲಿರೋ ದಿನಕರ್  ತೂಗುದೀಪ್, ಸಂತೋಷ್ ಆನಂದ ರಾಮ್ ಚಿತ್ರಗಳಿಗೆ ಮುಹೂರ್ತ ಯಾವಾಗ..? ಗೊತ್ತಿಲ್ಲ. ಅದಕ್ಕೂ ಮೊದಲೇ ಜೇಕಬ್, ಪುನೀತ್ ಜೋಡಿ ಸಿನಿಮಾ ಶುರುವಾಗುತ್ತಾ..? ಸುದ್ದಿ ಅಧಿಕೃತವಾಗುವವರೆಗೂ ನಿರೀಕ್ಷೆಗಳದ್ದಷ್ಟೇ ಸುದ್ದಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery