ಬಿಡುಗಡೆ ದಿನ ಅದ್ಧೂರಿಯಾಗಿ ತೆರೆ ಕಂಡು, ನಂತರ ಒಂದಿಷ್ಟು ಅಡೆತಡೆಗಳನ್ನೂ ಎದುರಿಸಿ ಸೂಪರ್ ಹಿಟ್ ಎನಿಸಿಕೊಂಡ ಚಿತ್ರ ಸಲಗ. ದುನಿಯಾ ವಿಜಯ್ ನಿರ್ದೇಶನದ ಫಸ್ಟ್ ಸಿನಿಮಾ ಎಂಬ ಭಾರಿ ನಿರೀಕ್ಷೆಯ ಭಾರ ಹೊತ್ತಿದ್ದ ಸಲಗ, ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆದಿದೆ.
ಹಿಟ್ ಎನ್ನುವುದನ್ನು ನೋಡಿ ತುಂಬಾ ದಿನಗಳಾಗಿತ್ತು. ನನ್ನ ಒಂದೊಂದು ಚಿತ್ರ ಸೋತಾಗಲೂ ಬೇಸರವಾಗುತ್ತಿತ್ತು. ಹೀರೋ ನಿರ್ದೇಶಕರನ್ನು ಬಯ್ಯೋದು ಸಾಮಾನ್ಯವಾಗಿತ್ತು. ಹೀಗಾಗಿ ನಾನೇ ಡೈರೆಕ್ಷನ್ ಮಾಡುವ ಹೊಣೆ ಹೊತ್ತುಕೊಂಡೆ. ಕೆ.ಪಿ.ಶ್ರೀಕಾಂತ್ ನನ್ನನ್ನು ನಂಬಿ, ಜವಾಬ್ದಾರಿ ನೀಡಿದರು. ಈಗ ಗೆದ್ದಿದ್ದೇವೆ ಎನ್ನುವುದು ದುನಿಯಾ ವಿಜಯ್ ಮಾತು.
ಕೊರೊನಾ ಕಾಲದ ಮಧ್ಯೆ ಈ ಚಿತ್ರ ಗೆದ್ದಿರುವುದು ದುನಿಯಾ ವಿಜಯ್ ಅವರಿಗೆ ಪವಾಡದಂತೆ ಕಾಣಿಸಿದೆ. ಲಾಕ್ ಡೌನ್, ಅಮ್ಮನ ಸಾವು, ಬಿಡುಗಡೆ ಟೆನ್ಷನ್ ಎಲ್ಲದರ ಮಧ್ಯೆ ದುನಿಯಾ ವಿಜಯ್ ಅವರಿಗೆ ತುಸು ನೆಮ್ಮದಿ ನೀಡಿರುವುದು ಸಲಗದ ಸಕ್ಸಸ್.
ನಮ್ಮ ಚಿತ್ರದ ಯಶಸ್ಸಿಗೆ ಕಾರಣ ಪ್ರೇಕ್ಷಕರು ಮತ್ತು ಅಭಿಮಾನಿಗಳು. ಹೀಗಾಗಿ ಅವರೆಲ್ಲರಿಗೂ ಧನ್ಯವಾದ ಹೇಳುವ ಪ್ರವಾಸ ಕೈಗೊಳ್ಳಲಿದ್ದೇವೆ. ಥಿಯೇಟರುಗಳಿಗೆ ಭೇಟಿ ನೀಡಲಿದ್ದೇವೆ. ನಮ್ಮೊಂದಿಗೆ ಇಡೀ ಸಲಗ ತಂಡ ಇರಲಿದೆ ಎಂದಿದ್ದಾರೆ ವಿಜಯ್.