ಸಲಗ ರಿಲೀಸ್ ಆಗಿದ್ದು ಆಯುಧಪೂಜೆಗೆ. ಕೋಟಿಗೊಬ್ಬ 3 ರಿಲೀಸ್ ಆಗಿದ್ದು ವಿಜಯದಶಮಿಗೆ. ಆಯುಧಪೂಜೆಯಂದೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3, ಗೊಂದಲ, ವಿವಾದಗಳಿಂದ ಒಂದು ದಿನ ತಡವಾಗಿ ಥಿಯೇಟರಿಗೆ ಬಂತು. ಸೂರಪ್ಪ ಬಾಬು ಪ್ಲಾನಿಂಗ್ ಕೊರತೆ ಇತ್ತ ಕಾಣಿಸುತ್ತಿದ್ದರೆ, ಅತ್ತ ಪಕ್ಕಾ ಪ್ಲಾನ್‍ನೊಂದಿಗೆ ರಿಲೀಸ್ ಮಾಡಿದ್ದ ಕೆ.ಪಿ.ಶ್ರೀಕಾಂತ್ ತಮ್ಮ ಚಿತ್ರವನ್ನು ಅಚ್ಚುಕಟ್ಟಾಗಿ ಪ್ರೇಕ್ಷರಕ ಮುಂದಿಟ್ಟಿದ್ದರು. ಒಂದು ದಿನದ ಗ್ಯಾಪ್‍ನಲ್ಲಿ ರಿಲೀಸ್ ಆದ ಎರಡೂ ಸ್ಟಾರ್ ನಟರ ಚಿತ್ರಗಳಲ್ಲಿ ಗೆದ್ದೋರು ಯಾರು?
ಆಯುಧಪೂಜೆಯ ದಿನ ರಿಲೀಸ್ ಆದ ಸಲಗ ಮೊದಲ ದಿನ ಗಳಿಸಿದ್ದು 8 ಕೋಟಿಗೂ ಹೆಚ್ಚು. ದುನಿಯಾ ವಿಜಯ್ ಚಿತ್ರಗಳಲ್ಲಿ ಇದು ಮೊದಲ ದಿನದ ದಾಖಲೆ. ಅದಾದ ನಂತರವೂ ಸಲಗ ವೀಕೆಂಡ್ ಮತ್ತು ಹಬ್ಬದ ರಜಾ ದಿನಗಳ ಸದುಪಯೋಗ ಪಡಿಸಿಕೊಂಡಿತು. ಸೋಮವಾರದ ನಂತರವೂ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿದೆ. ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡುವುದಿಲ್ಲ ಎನ್ನುವ ಮೂಲಕ ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ ಸಲಗ ಟೀಂ.
ಸುದೀಪ್ ಅವರ ಕೋಟಿಗೊಬ್ಬ 3, ಮೊದಲ ದಿನ ಗಳಿಸಿದ್ದು 12 ಕೋಟಿಗೂ ಹೆಚ್ಚು. ಒಂದು ದಿನದ ನಷ್ಟ ಮಾಡಿಕೊಂಡರೂ ನಂತರವೂ ಮುನ್ನುಗ್ಗಿತು. ಕೋಟಿಗೊಬ್ಬ 3 ಕಲೆಕ್ಷನ್ ಕೂಡಾ ಸ್ಥಿರತೆ ಕಾಯ್ದುಕೊಂಡಿದೆ.
ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಂದರೆ ನಷ್ಟವಾಗಬಹುದು ಎಂದು ಆತಂಕಗೊಂಡಿದ್ದ ಚಿತ್ರರಂಗಕ್ಕೆ ಇದು ರಿಲ್ಯಾಕ್ಸಿಂಗ್ ನ್ಯೂಸ್. ಎರಡೂ ಗೆದ್ದಿವೆ. ಶೀಘ್ರದಲ್ಲೇ ಎರಡೂ ಚಿತ್ರಗಳ ನಿರ್ಮಾಪಕರು ಸಕ್ಸಸ್ ಮೀಟ್ ಕರೆದು ವಿವರ ಹಂಚಿಕೊಳ್ಳಲಿದ್ದಾರೆ.