ಅನಂತ್ ನಾಗ್ ಅವರಿಗೆ ತಾತನ ಪಾತ್ರಗಳು ಹೊಸದಲ್ಲ. ಆದರೆ ದಿಗಂತ್ಗೆ ತಾತನಾಗುತ್ತಿರುವುದು ಹೊಸದು. ತಿಮ್ಮಯ್ಯ & ತಿಮ್ಮಯ್ಯ ಅನ್ನೋ ಚಿತ್ರವೊಂದು ಸೆಟ್ಟೇರುತ್ತಿದ್ದು, ದಿಗಂತ್ ಮತ್ತು ಅನಂತ ನಾಗ್ ಮೊಮ್ಮಗ, ತಾತನಾಗಿ ನಟಿಸಲಿದ್ದಾರೆ. ವಜ್ರಕಾಯ ಖ್ಯಾತಿಯ ಶುಭ್ರಾ ಅಯ್ಯಪ್ಪ ಹೀರೋಯಿನ್.
ಸಂಜಯ್ ಶರ್ಮಾ ಎಂಬುವವರು ಚಿತ್ರವನ್ನು ನಿರ್ದೇಶಿಸಲಿದ್ದು, ಅವರ ಅಣ್ಣ ರಾಜೇಶ್ ಶರ್ಮಾ ನಿರ್ಮಾಪಕರಾಗಿದ್ದಾರೆ. ದಿಗಂತ್ ಮತ್ತು ಅನಂತ್ ಇಬ್ಬರೂ ಒಟ್ಟಿಗೇ ಕೆಲವು ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಪಂಚರಂಗಿ, ಗಾಳಿಪಟ ಸೇರಿದಂತೆ ಕಾಂಬಿನೇಷನ್ ಚಿತ್ರಗಳು ಹಿಟ್ ಕೂಡಾ ಆಗಿವೆ.