Print 
nenapirali prem,

User Rating: 0 / 5

Star inactiveStar inactiveStar inactiveStar inactiveStar inactive
 
ತುಮಕೂರಿನಲ್ಲಿ ನಟ ಪ್ರೇಮ್ ಚಂಡಿಕಾ ಹೋಮ
Nenapirali Prem

ನೆನಪಿರಲಿ ಪ್ರೇಮ್ ದಂಪತಿ ದುರ್ಗಾ ಪೂಜೆ ಪ್ರಯುಕ್ತ ಚಂಡಿಕಾ ಹೋಮ ಮಾಡಿದೆ. ಈ ಬಾರಿ ತುಮಕೂರು ಜಿಲ್ಲೆಯ ಊರುಕೆರೆಯಲ್ಲಿ ಚಂಡಿಕಾ ಹೋಮ ಮಾಡಿದ್ದಾರೆ ಪ್ರೇಮ್. ಪ್ರೇಮ್ ಜೊತೆ ಅವರ ಪತ್ನಿ ಹಾಗೂ ಮಗಳು ಹೋಮದಲ್ಲಿ ಭಾಗವಹಿಸಿದ್ದರು.

ತುಮಕೂರಿನಿಂದ ಶಿರಾಗೆ ಹೋಗುವ ಮಾರ್ಗದಲ್ಲಿ ಸಿಗುವ ಊರುಕೆರೆಯಲ್ಲಿ ದುರ್ಗಾದೇವಿ ದೇವಸ್ಥಾನವಿದೆ. ಅಲ್ಲಿಗೆ ಪ್ರತಿ ವರ್ಷ ಭೇಟಿ ಕೊಡುತ್ತಾರೆ ಪ್ರೇಮ್. ಈ ಬಾರಿ ಚಂಡಿಕಾ ಹೋಮ ಮಾಡಿ ನವಧಾನ್ಯಗಳನ್ನು ಸೇರಿದಂತೆ ವಿವಿಧ ಸಮ್ಮಿತ್ತುಗಳನ್ನು ಆಹುತಿ ನೀಡಿ ಪೂರ್ಣಾಹುತಿ ಅರ್ಪಿಸಿದ್ದಾರೆ ಪ್ರೇಮ್.