ಜೋಗಿ ಪ್ರೇಮ್ ನಿರ್ದೇಶನದ ಹೊಸ ಲವ್ ಸ್ಟೋರಿ ಏಕ್ ಲವ್ ಯಾ. ಇದು ರಕ್ಷಿತಾ ಪ್ರೇಮ್ ಸೋದರ ರಾಣಾ ಅಭಿನಯದ ಮೊದಲ ಸಿನಿಮಾ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಡೈರೆಕ್ಟ್ ಮಾಡಿರೋ ಅಪ್ಪಟ ಲವ್ ಸ್ಟೋರಿ. ರಕ್ಷಿತಾ ಪ್ರೇಮ್ ತಮ್ಮನ ಚಿತ್ರದ ಹಾಡುಗಳು ಈಗಾಗಲೇ ಪ್ರೇಮಿಗಳ ಎದೆಯಲ್ಲಿ ಗುಂಯ್ಗುಟ್ಟುತ್ತಿವೆ. ಚಿತ್ರಕ್ಕೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿಗೆ ಅರ್ಥಾತ್ ಜನವರಿ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಾಯಕಿಯರು. ರಚಿತಾ ರಾಮ್ ಇದೇ ಮೊದಲ ಬಾರಿಗೆ ಲಿಪ್ ಲಾಕ್ ಮಾಡಿರೋ ಚಿತ್ರದಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಸಲಗ, ಕೋಟಿಗೊಬ್ಬ-3ಯಿಂದ ಶುರುವಾದ ಸಿನಿಮಾ ಹಬ್ಬ.. ಸಂಕ್ರಾಂತಿಗೆ ಇನ್ನೊಂದು ಮಜಲು ತಲುಪಲಿದೆ.