ರಿಲೀಸ್ ಆಗುತ್ತೋ ಇಲ್ವೋ.. ಎಂದು ಕಟ್ಟಕಡೆಯ ಕ್ಷಣದವರೆಗೂ ಟೆನ್ಷನ್ ಸೃಷ್ಟಿಸಿದ್ದ ಕೋಟಿಗೊಬ್ಬ 3 ಕೊನೆಗೂ ರಿಲೀಸ್ ಆಗಿದೆ. ವಿತರಕರು ಬದಲಾಗಿ ಸೈಯದ್ ಸಲಾಂ, ಗಂಗಾಧರ್ ಮತ್ತು ಜಾಕ್ ಮಂಜು ವಿತರಣೆಗೆ ನಿಲ್ಲೋದ್ರೊಂದಿಗೆ ಬಿಡುಗಡೆ ಸಮಸ್ಯೆ ಪರಿಹಾರವಾಯ್ತು. ಥಿಯೇಟರಿನಲ್ಲಿ ಬೆಳಗ್ಗಿನಿಂದಲೇ ಪ್ರದರ್ಶನ ಶುರುವಾಯ್ತು.
ಕಿಚ್ಚ ಸುದೀರ್ಘ ಕಾಲದ ನಂತರ ಡಬಲ್ ಌಕ್ಟಿಂಗ್ನಲ್ಲಿ ಬಂದಿರೋ ಕೋಟಿಗೊಬ್ಬ 3, ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ. ರವಿಶಂಕರ್ ಪರ್ಫಾಮೆನ್ಸ್ಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ನಿರ್ದೇಶಕ ಶಿವಕಾರ್ತಿಕ್ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸೂರಪ್ಪ ಬಾಬು ರಿಲ್ಯಾಕ್ಸ್ ಆಗಿದ್ದಾರೆ. ಸುದೀಪ್ ಹಿಟ್ ಚಿತ್ರಗಳ ಲಿಸ್ಟ್ಗೆ ಇನ್ನೊಂದು ಸಿನಿಮಾ ಸೇರಿಕೊಂಡಿದೆ.