ದಸರಾಗೆ ರಿಲೀಸ್ ಆಗುತ್ತಿರೋ ಸಿನಿಮಾ ಸಲಗ. ಭರ್ಜರಿ ಸದ್ದನ್ನೇ ಮಾಡುತ್ತಿದೆ. ಆದರೆ ಮೆಜೆಸ್ಟಿಕ್ ಥಿಯೇಟರುಗಳದ್ದೇ ಪ್ರಾಬ್ಲಮ್. ಕಳೆದ ವಾರ ರಿಲೀಸ್ ಆಗಿದ್ದ ನಿನ್ನ ಸನಿಹಕೆ ಚಿತ್ರ ಮೊದಲ ದಿನದ ಮೊದಲ ಶೋನಲ್ಲೇ ಎಡವಟ್ಟಾಗಿತ್ತು. ಶೋ ರದ್ದಾಗಿತ್ತು. ಆ ತಾಂತ್ರಿಕ ಸಮಸ್ಯೆಗಳನ್ನು ಇನ್ನೂ ಪರಿಹರಿಸಿಕೊಂಡಿಲ್ಲ ಸಂತೋಷ್. ಹೀಗಾಗಿ ಸಲಗ ಚಿತ್ರತಂಡ ಸಂತೋಷ್ ಚಿತ್ರಮಂದಿರವನ್ನು ಕೈಬಿಟ್ಟು, ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.
ಸಲಗ ಅಷ್ಟೇ ಅಲ್ಲ, ಅದೇ ಕಾಂಪ್ಲೆಕ್ಸಿನಲ್ಲಿರೋ ನರ್ತಕಿಯಲ್ಲಿ ಕೋಟಿಗೊಬ್ಬ 3 ರಿಲೀಸ್ ಆಗಬೇಕಿತ್ತು. ಆ ಚಿತ್ರವನ್ನು ಭೂಮಿಕಾ ಚಿತ್ರಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.
ಮೆಜೆಸ್ಟಿಕ್‍ನಲ್ಲಿರೋ ಸಂತೋಷ್, ನರ್ತಕಿ ಹಾಗೂ ಸಪ್ನಾ ಚಿತ್ರಮಂದಿರಗಳಿಗೆ ಮಾಲೀಕರು ಒಬ್ಬರೇ. ಆದರೆ ಈ ಥಿಯೇಟರುಗಳಲ್ಲಿ ಸಂತೋಷ ನರ್ತನ ಮಾಡೋದಕ್ಕಿಂತ ಸಮಸ್ಯೆಗಳೇ ಹೆಚ್ಚು. ಈ ಬಗ್ಗೆ ಚಿತ್ರ ನಿರ್ಮಾಪಕರು ಹಲವು ಬಾರಿ ಮಾಲೀಕರ ಗಮನಕ್ಕೆ ತಂದಿದ್ದರೂ, ಅವರು ಬದಲಾಗಿಲ್ಲ ಅನ್ನೋ ಆರೋಪಗಳಿವೆ.