ಸಲಗ ಚಿತ್ರ ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ. ಅವರು ತಾವು ನಾಯಕ ನಟರಾಗಿದ್ದ ಮೊದಲ ಸಿನಿಮಾ ದುನಿಯಾಗೆ ಯಾವ ರೀತಿ ಟೆನ್ಷನ್ನಲ್ಲಿದ್ದರೋ ಅಂತಹುದೇ ಟೆನ್ಷನ್, ಸಲಗ ಚಿತ್ರದಲ್ಲೂ ಇದೆ. ಆದರೆ.. ಅದಕ್ಕಿಂತ ಡಿಫರೆಂಟ್ ಸ್ಥಿತಿಯಲ್ಲಿರೋದು ನಾಯಕಿ ಸಂಜನಾ ಆನಂದ್.
ಕೆಮಿಸ್ಟ್ರಿ ಆಫ್ ಕರಿಯಪ್ಪದಿಂದ ಚಿತ್ರರಂಗಕ್ಕೆ ಬಂದ ಸಂಜನಾಗೆ ಇದು ಈಗಾಗಲೇ 4ನೇ ಸಿನಿಮಾ. ಆದರೆ ನನಗೆ ಇದೇ ನನ್ನ ಮೊದಲ ಸಿನಿಮಾ ಅನ್ನೋ ಫೀಲಿಂಗ್ ಬರುತ್ತಿದೆ. ಕಾರಣ 2 ವರ್ಷಗಳ ಗ್ಯಾಪ್ ಹಾಗೂ ಇದು ನನ್ನ ಮೊದಲ ಕಮರ್ಷಿಯಲ್ ಸಿನಿಮಾ ಎನ್ನುತ್ತಾರೆ ಸಂಜನಾ.
ದುನಿಯಾ ವಿಜಯ್ ಚಿತ್ರದಲ್ಲಿ ಎಲ್ಲರ ಪಾತ್ರಗಳಿಗೂ ಸಾಕಷ್ಟು ಸ್ಪೇಸ್ ಕೊಟ್ಟಿದ್ದಾರೆ. ನಾನು ತುಂಬಾ ಚಿತ್ರಗಳಲ್ಲೇನೂ ನಟಿಸಿಲ್ಲ. ಆದರೆ ಕಮರ್ಷಿಯಲ್ ಚಿತ್ರಗಳ ನಟನೆ ಹೇಗೆ ಡಿಫರೆಂಟ್ ಅನ್ನೋದು ಗೊತ್ತು. ಒಳ್ಳೆಯ ಔಟ್ಪುಟ್ ಸಿಕ್ಕಾಗ ವಿಜಯ್ ಸರ್ ನನಗೆ ನೀಡುತ್ತಿದ್ದ ಪ್ರೋತ್ಸಾಹ ಮರೆಯಲಾಗದು ಎಂದಿದ್ದಾರೆ ಸಂಜನಾ ಆನಂದ್.
ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಡಾಲಿ ಧನಂಜಯ್ ಪೊಲೀಸ್ ಆಫೀಸರ್ ಆಗಿದ್ದಾರೆ. ಹಬ್ಬದ ದಿನ 300+ ಥಿಯೇಟರುಗಳಲ್ಲಿ ಸಲಗ ರಿಲೀಸ್ ಆಗುತ್ತಿದೆ.