ಮಿಸ್ಟರ್ ಇಂಡಿಯಾ ಖ್ಯಾತಿಯ ಜಿಮ್ ರವಿ ಇದೇ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಸಿನಿಮಾ ಪುರುಷೋತ್ತಮ. ಅಪೂರ್ವ ನಾಯಕಿಯಾಗಿರುವ ಚಿತ್ರಕ್ಕೆ ವಿಜಯ್ ರಾಮೇಗೌಡ ಭೂಕನಕೆರೆ ನಿರ್ಮಾಪಕರು. ಈ ಚಿತ್ರಕ್ಕೀಗ ರಂಗಿತರಂಗ ಭಂಡಾರಿಯವರ ಬಲ ಸಿಕ್ಕಿದೆ.
ಚಿತ್ರದ 2ನೇ ಹಾಡನ್ನು ನಟ ನಿರೂಪ್ ಭಂಡಾರಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದ ಹಾಡು ಜಿಮ್ ರವಿ ಯೂಟ್ಯೂಬ್ ಚಾನೆಲ್ಲಿನಲ್ಲಿ ರಿಲೀಸ್ ಆಗಿದೆ.