ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಸಲಗ ಚಿತ್ರತಂಡ ಪ್ರಚಾರವನ್ನು ಜೋರಾಗಿಸಿದೆ. ಒಂದೆಡೆ ಸುದ್ದಿಗೋಷ್ಠಿ ನಡೆಸಿ ಚಿತ್ರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ದುನಿಯಾ ವಿಜಯ್, ಮತ್ತೊಂದೆಡೆ ದೇವರ ಮೊರೆ ಹೋಗಿದ್ದಾರೆ.
ಸಲಗ ವಿಜಯ್ ಮತ್ತು ಪತ್ನಿ ಕೀರ್ತಿ ಗೌಡ ಅಣ್ಣಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿದ್ದಾರೆ. ಹಾಲಿನ ಅಭಿಷೇಕ ಮಾಡಿದ್ದಾರೆ.
ದುನಿಯಾ ವಿಜಯ್ ಅವರಿಗೆ ಇದು ಅವರ ಮೊದಲು ಹೀರೋ ಆಗಿ ನಟಿಸಿದ್ದ ಚಿತ್ರ ದುನಿಯಾದಷ್ಟೇ ಇಂಪಾರ್ಟೆಂಟ್. ಏಕೆಂದರೆ ಇದು ಅವರ ನಿರ್ದೇಶನದ ಮೊದಲ ಸಿನಿಮಾ. ವಿಜಯ್ ಎದುರು ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಂಜನಾ ಆನಂದ್ ನಾಯಕಿ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಇದೇ ದಸರಾ ಹಬ್ಬದ ದಿನ ರಿಲೀಸ್ ಆಗುತ್ತಿದೆ.
ನಾಳೆ ಅಂದರೆ ಅಕ್ಟೋಬರ್ 10ರಂದು ಪ್ರೀ-ಈವೆಂಟ್ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಹಾಗೂ ಉಪೇಂದ್ರ ಭಾಗವಹಿಸಲಿದ್ದಾರೆ.