` ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್
KGF Chapter 2 Image

ಯಾವುದೇ ಸಮಸ್ಯೆ ಬರದೇ ಹೋಗಿದ್ದರೆ ಕೆಜಿಎಫ್ ಚಾಪ್ಟರ್ 2, 2021ರ ಜುಲೈನಲ್ಲೇ ರಿಲೀಸ್ ಆಗಬೇಕಿತ್ತು. ಈಗ 2022ರ ಏಪ್ರಿಲ್‍ಗೆ ಪೋಸ್ಟ್ ಪೋನ್ ಆಗಿದೆ. ಇದರ ನಡುವೆ ಮತ್ತೆ ಚಿತ್ರದ ಶೂಟಿಂಗ್ ನಡೆದಿದೆ. 2020ರ ಡಿಸೆಂಬರ್‍ನಲ್ಲೇ ಕ್ಲೈಮಾಕ್ಸ್ ಶೂಟಿಂಗ್ ಮುಗೀತು ಎಂದಿದ್ದ ಕೆಜಿಎಫ್ ಟೀಂ, ಈಗ ಮತ್ತೊಮ್ಮೆ ಶೂಟಿಂಗ್ ಮಾಡಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರಿರೋದೇ ಹಾಗೆ. ಸ್ಕ್ರೀನ್‍ನಲ್ಲಿ ಕಾಂಪ್ರೊಮೈಸ್ ಆಗುವವರಲ್ಲ. ಎಡಿಟಿಂಗ್ ಟೇಬಲ್ ಮೇಲೆ ಕುಳಿತಾಗ ಒಂದಿಷ್ಟು ಶಾಟ್ಸ್ ಬೇಕು ಎನ್ನಿಸಿ ಮತ್ತೆ ಚಿತ್ರೀಕರಣ ಮಾಡಿದ್ದಾರೆ ನೀಲ್. ನೈಸ್ ರೋಡ್‍ನಲ್ಲಿ ಒಂದು ಚೇಸಿಂಗ್ ಸೀನ್‍ನ ದೃಶ್ಯ ಚಿತ್ರೀಕರಿಸಲಾಗಿದೆ. ನೀಲ್ ಜೊತೆ ಕ್ಯಾಮೆರಾಮನ್ ಭುವನ್ ಗೌಡ ಭಾಗಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರಂತೂ ಇತ್ತ ಕೆಜಿಎಫ್ ಚಾಪ್ಟರ್ 2 ಪೋಸ್ಟ್ ಪ್ರೊಡಕ್ಷನ್ ಮತ್ತು ಅತ್ತ ಸಲಾರ್ ಶೂಟಿಂಗ್.. ಎರಡೂ ಕಡೆ ಬ್ಯುಸಿ. ಇನ್ನೊಂದೆಡೆ ಬಘೀರ ವೇಯ್ಟಿಂಗ್.