ಕೋಟಿಗೊಬ್ಬ 3 ಮುಂದಿನ ವಾರ ರಿಲೀಸ್ ಆಗುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಸೂಪರ್ ಹಿಟ್ ಆಗಿದ್ದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ಸೂರಪ್ಪ ಬಾಬು ನಿರ್ಮಾಣದ ಚಿತ್ರ, ಅಕ್ಟೋಬರ್ 14ರಂದು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಅದೇ ದಿನ ಸಲಗವೂ ಬರುತ್ತಿದೆ.
ಮೊದಲ ಹಂತವಾಗಿ 350 ಥಿಯೇಟರ್ ಪ್ಲಾನ್ ಇದೆ. ಇನ್ನೂ ಹೆಚ್ಚಾಗುವ ನಿರೀಕ್ಷೆಯೂ ಇದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರವೇ ರಿಲೀಸ್ ಮಾಡುತ್ತಿದ್ದೇವೆ. ಹೊರ ರಾಜ್ಯದಲ್ಲಿ ಕೂಡಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಸೂರಪ್ಪ ಬಾಬು.
ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬನಿಗೆ ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಸುದೀಪ್ ಜೊತೆ ರವಿಶಂಕರ್ ಈ ಚಿತ್ರದಲ್ಲೂ ಕಂಟಿನ್ಯೂ ಆಗಿದ್ದಾರೆ.