ಸಲಗ. ಚಿತ್ರದ ಬಳಗವೇ ದೊಡ್ಡದು. ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾದರೆ, ದುನಿಯಾ ವಿಜಯ್, ಡಾಲಿ ಧನಂಜಯ್, ಸಂಜನಾ ಆನಂದ್, ರಂಗಾಯಣ ರಘು, ಅಚ್ಯುತ್ ಕುಮಾರ್, ಚರಣ್ ರಾಜ್ ಮ್ಯೂಸಿಕ್ಕು.. ಹೀಗೆ ದೊಡ್ಡ ದೊಡ್ಡವರ ಶಕ್ತಿಯೇ ಸೇರಿದೆ. ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವೂ ಸಿಕ್ಕಿದೆ. ಶಿವಣ್ಣ ಫ್ಯಾಮಿಲಿಯ ಸದಸ್ಯರಂತೆಯೇ ಇರುವ ಕೆ.ಪಿ.ಶ್ರೀಕಾಂತ್ ಅವರ ಸಲಗ ಚಿತ್ರವನ್ನು ಅರ್ಪಿಸುತ್ತಿರುವುದು ಗೀತಾ ಶಿವರಾಜ್‍ಕುಮಾರ್. ಇದೆಲ್ಲದರ ಜೊತೆಗೆ ಪವರ್ ಸ್ಟಾರ್ ಪುನೀತ್ ಪವರ್ ಕೂಡಾ ಸಲಗ ಚಿತ್ರಕ್ಕೆ ಸಿಕ್ಕಿದೆ.
ರಿಲೀಸ್ ಮಾಡೋಕೂ ಮೊದಲು ಸಲಗ ಟೀಂ ಅಕ್ಟೋಬರ್ 10ರಂದು ಸಲಗ ಚಿತ್ರದ ಪ್ರೀ-ಈವೆಂಟ್ ಶೋ ಇಟ್ಟುಕೊಂಡಿದೆ. ಆ ದಿನ ಸಲಗ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಅದನ್ನು ರಿಲೀಸ್ ಮಾಡೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಸಲಗನ ಆರ್ಭಟ ಜೋರಾಗುತ್ತಿದೆ.