ಸಲಗ. ಇದೇ ದಸರಾಗೆ ರಿಲೀಸ್ ಆಗುತ್ತಿರುವ ಬಹುನಿರೀಕ್ಷಿತ ಚಿತ್ರ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದ ಮೂಲಕ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರೂ ಆಗಿರುವ ಚಿತ್ರ. ಈ ಚಿತ್ರಕ್ಕೀಗ ಟಗರಿನ ಬಲ ಸಿಕ್ಕಿದೆ. ರಾಜ್ಯ ರಾಜಕೀಯದಲ್ಲಿ ಟಗರು ಎಂದೇ ಫೇಮಸ್ ಆಗಿರೋ ಕಾಂಗ್ರೆಸ್ ಲೀಡರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ದುನಿಯಾ ವಿಜಯ್ ಅವರೊಂದಿಗೆ ತಮ್ಮನ್ನು ಭೇಟಿ ಮಾಡಿದ ಚಿತ್ರತಂಡಕ್ಕೆ ಶುಭ ಕೋರಿರುವ ಸಿದ್ದರಾಮಯ್ಯ, ದುನಿಯಾ ವಿಜಯ್ ಅವರನ್ನು ಪ್ರತಿಭಾವಂತ ಕಲಾವಿದ ಎಂದು ಹೊಗಳಿದ್ದಾರೆ. ಅಕ್ಟೋಬರ್ 14ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ ಸಕ್ಸಸ್ ಆಗಲಿ ಎಂದಿದ್ದಾರೆ. ಅಂದಹಾಗೆ ಸಲಗ ಚಿತ್ರದ ಮುಹೂರ್ತಕ್ಕೂ ಸಿದ್ದರಾಮಯ್ಯ ಬಂದು ಶುಭ ಕೋರಿದ್ದರು.
ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಸಲಗ. ಸಂಜನಾ ಆನಂದ್ ನಾಯಕಿ. ಚಿತ್ರ ಸೆನ್ಸಾರ್ ಮುಗಿಸಿದ್ದು, ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.