ಗರುಡ ಗಮನ ವೃಷಭ ವಾಹನ. ಪರಂವಾ ಸ್ಟುಡಿಯೋಸ್‍ನ ಸಿನಿಮಾ. ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಟಿಸಿ, ನಿರ್ದೇಶಿಸಿರುವ ಸಿನಿಮಾ. 2020ರಲ್ಲೇ ರಿಲೀಸ್ ಆಗಬೇಕಿದ್ದ ಚಿತ್ರವಿದು. ಕೊರೊನಾ, ಲಾಕ್‍ಡೌನ್ ಕಾರಣದಿಂದಾಗಿ ನಿಂತಿದ್ದ ಚಿತ್ರದ ಮೇಲೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗಮನ ಹರಿಸಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ವಿತರಣೆಯ ಹಕ್ಕನ್ನೂ ಪಡೆದುಕೊಂಡಿದ್ದಾರೆ.
ರಾಜ್ ಬಿ.ಶೆಟ್ಟಿಯವರ ಪ್ರತಿಭೆಯನ್ನು ಹೊಗಳಿರುವ ರಕ್ಷಿತ್ ಶೆಟ್ಟಿ, 3 ಗಂಟೆಗಳ ಕಾಲ ನಮ್ಮನ್ನು ಹಿಡಿದಿಟ್ಟುಕೊಂಡು, ನಂತರ ಕಾಡುವ ಶಕ್ತಿ ಗರುಡ ಗಮನ ವೃಷಭ ವಾಹನ ಚಿತ್ರಕ್ಕಿದೆ ಎಂದಿದ್ದಾರೆ.