ಧನ್ಯಾ ರಾಮ್‍ಕುಮಾರ್ ಅಭಿನಯದ ಮೊದಲ ಚಿತ್ರ ನಿನ್ನ ಸನಿಹಕೆ. ಇದೇ ವಾರ ರಿಲೀಸ್ ಆಗುತ್ತಿದೆ. ರಾಮ್‍ಕುಮಾರ್ ಮಗಳು. ರಾಜ್‍ಕುಮಾರ್ ಮೊಮ್ಮಗಳು. ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ಎಲ್ಲರಿಗೂ ಸೋದರ ಸೊಸೆ. ರಾಜ್ ಕುಟುಂಬದಿಂದ ಹೀರೋಯಿನ್ ಆಗುತ್ತಿರೋ ಮೊದಲ ಪ್ರತಿಭೆ. ಅಂದಹಾಗೆ ಚಿತ್ರದಲ್ಲಿ ಈಕೆಯ ಪಾತ್ರದ ಹೆಸರು ಅಮೃತಾ.
ಅಮೃತಾ ಪಾತ್ರದಲ್ಲಿ ಲೀನವಾಗೋಕೆ ನನಗೇನೂ ಕಷ್ಟವಾಗಲಿಲ್ಲ. ವರ್ಕ್‍ಶಾಪ್ ಹೆಲ್ಪ್ ಮಾಡಿದವು. ನನ್ನ ನಟನೆ ನೋಡಿದವರೆಲ್ಲ ಇದು ನಿಮ್ಮ ಫಸ್ಟ್ ಸಿನಿಮಾ ಎಂದು ಅನಿಸುತ್ತಿಲ್ಲ ಎಂದರು. ಅಷ್ಟೇ ಅಲ್ಲ ಚಿತ್ರದಲ್ಲಿ ನನ್ನ ವೊರಿಜಿನಲ್ ನಿಕ್ ನೇಮ್ ಡಿಂಪಿ. ಅದನ್ನೂ ಹಾಗೆಯೇ ಬಳಸಿದ್ದಾರ ಎಂದಿದ್ದಾರೆ ಧನ್ಯಾ ರಾಮ್‍ಕುಮಾರ್.
ಸೂರಜ್ ಗೌಡ ಹೀರೋ ಕಮ್ ನಿರ್ದೇಶಕರಾಗಿರುವ ನಿನ್ನ ಸನಿಹಕೆ ಚಿತ್ರದ ಹಾಡುಗಳು ಈಗಾಗಲೇ ಗುನುಗುವಂತೆ ಮಾಡಿವೆ. ಚಿತ್ರಕ್ಕೆ ಸಂಗೀತ ನೀಡಿರುವುದು ರಘು ದೀಕ್ಷಿತ್.