ಬಾಹುಬಲಿ & ಕೆಜಿಎಫ್ ನಂತರ ದ.ಭಾರತ ಚಿತ್ರರಂಗದಲ್ಲಿ ಶುರುವಾದ ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರ.. ಆರ್ಭಟ ಮುಂದುವರೆಯುತ್ತಿದೆ. ಕೆಜಿಎಫ್ ಚಿತ್ರವೇನೋ 2022ರ ಏಪ್ರಿಲ್ 14ಕ್ಕೆ ಡೇಟ್ ಫಿಕ್ಸ್ ಮಾಡಿಕೊಂಡಾಯ್ತು. ಆದರೆ ಇನ್ನೂ ಹಲವಾರು ಚಿತ್ರಗಳು ಕ್ಯೂನಲ್ಲಿವೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ನಟಿಸಿರುವ, ಸುಕುಮಾರ್ ನಿರ್ದೇಶನದ ಪುಷ್ಪ ಡಿಸೆಂಬರ್ 17ಕ್ಕೆ ರಿಲೀಸ್ ಆಗುತ್ತಿದೆ.
2022ರ ಜನವರಿ ಮೊದಲ ವಾರ, ಜನವರಿ 7ಕ್ಕೆ ಆರ್‍ಆರ್‍ಆರ್ ರಿಲೀಸ್. ಅದು ರಾಜಮೌಳಿ ಡೈರೆಕ್ಷನ್‍ನಲ್ಲಿ ಎನ್‍ಟಿಆರ್, ರಾಮ್‍ಚರಣ್ ತೇಜ, ಅಜಯ್ ದೇವಗನ್, ಅಲಿಯಾ ಭಟ್.. ನಟಿಸಿರುವ ಚಿತ್ರ.
ಇದರ ನಡುವೆ ಡಿಸೆಂಬರ್ ಹೊತ್ತಿಗೆ ಕನ್ನಡದ ಹಲವು ಚಿತ್ರಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಶ್ರೀಮುರಳಿಯವರ ಮದಗಜ, ರಕ್ಷಿತ್ ಶೆಟ್ಟಿಯವರ ಚಾರ್ಲಿ 777 ಡಿಸೆಂಬರ್‍ಗೆ ರಿಲೀಸ್ ಆಗುತ್ತಿವೆ. ಈ ಎರಡೂ ಚಿತ್ರಗಳು ಈಗ ತಮ್ಮ ಚಿತ್ರಗಳಿಗೆ ಸ್ಪೆಷಪ್ ಪ್ಲಾನ್ ಮಾಡಿಕೊಳ್ಳಬೇಕು