ಕೋಟಿಗೊಬ್ಬ 3, ಇದೇ ಅಕ್ಟೋಬರ್‍ನಲ್ಲಿ ದಸರೆಗೆ ಬರುತ್ತಿದೆ. ಅದೇ ದಿನ ಸಲಗ ಚಿತ್ರವೂ ತೆರೆ ಕಾಣುತ್ತಿದೆ. ಶ್ರೀಕೃಷ್ಣ@ಜಿಮೇಲ್.ಕಾಮ್ ಸಿನಿಮಾ ಕೂಡಾ ಅದೇ ದಿನ ರಿಲೀಸ್. ಆದರೆ, ಮದಗಜ ಮಾತ್ರ, ಕೋಟಿಗೊಬ್ಬನ ಜೊತೆಯಲ್ಲೇ ಬರ್ತಾನೆ.
ಮದಗಜ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಕಂಪ್ಲೀಟ್ ಬ್ಯುಸಿಯಾಗಿದೆ ಮದಗಜ ಟೀಂ. ಸಿನಿಮಾವನ್ನು ಡಿಸೆಂಬರ್‍ನಲ್ಲಿ ರಿಲೀಸ್ ಮಾಡೋ ತಯಾರಿಯಲ್ಲಿರೋ ಚಿತ್ರತಂಡ, ಕೋಟಿಗೊಬ್ಬ 3 ರಿಲೀಸ್ ಜೊತೆ ಪ್ರಚಾರವನ್ನೂ ಶುರು ಮಾಡಲಿದೆ. ಕೋಟಿಗೊಬ್ಬ 3 ಜೊತೆಯಲ್ಲೇ ಮದಗಜ ಚಿತ್ರದ ಟೀಸರ್ ಕೂಡಾ ತೆರೆ ಕಾಣಲಿದೆ.
ಸುದೀಪ್ ಚಿತ್ರದ ಮೂಲಕ ಶ್ರೀಮುರಳಿ ಚಿತ್ರದ ಪ್ರಮೋಷನ್ ಕೆಲಸಗಳು ಶುರುವಾಗಲಿದೆ.